ಕಿಂಗ್ಸ್ಟನ್: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ತಂಡ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದೆ ಎಂದು ಪಾಕಿಸ್ತಾನದ ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ಸಬೀನಾ ಪಾರ್ಕ್‌ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ನಲ್ಲಿ ಜಯಗಳಿಸಿತು.
"ಟೆಸ್ಟ್ ಕ್ರಿಕೆಟ್‌ನ ಪ್ರದರ್ಶನಕ್ಕಾಗಿ ನಾವು ಉತ್ತಮ ಜಾಹೀರಾತು ಪಡೆಯುವುದಿಲ್ಲ. ಎರಡೂ ತಂಡಗಳು ಚೆನ್ನಾಗಿ ಹೋರಾಡಿವೆ. ಆದರೆ, ದುರದೃಷ್ಟವಶಾತ್ ಪಂದ್ಯದ ನಿರ್ಣಾಯಕ ಹಂತದಲ್ಲಿ ನಾವು ಕೆಲವು ಉತ್ತಮ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ. ಅದು ಕೊನೆಯಲ್ಲಿ ನಮ್ಮ ಸೋಲಿಗೆ ಕಾರಣವಾಯಿತು ಎಂದು ವಕಾರ್ ಹೇಳಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.
ಪಿಚ್ ಸೀಮ್ ಬೌಲಿಂಗ್‌ಗೆ ಅನುಕೂಲಕರವಾಗಿತ್ತು ಮತ್ತು ನಮ್ಮವರು ಚೆನ್ನಾಗಿ ಬೌಲಿಂಗ್ ಮಾಡಿದರು. ನಿಸ್ಸಂದೇಹವಾಗಿ, ನಾವು ಕಷ್ಟಪಟ್ಟು ಹೋರಾಡಿದ್ದೇವೆ. ಆದರೆ, ಕೆಲವು ಕ್ಯಾಚ್‌ಗಳು ಕೈ ತಪ್ಪಿದ್ದರಿಂದ ಆಟವನ್ನು ಗೆಲ್ಲಲಾಗಲಿಲ್ಲ ಎಂದಿದ್ದಾರೆ.