ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಲೆಗ್ ಬ್ರೇಕ್ ಮತ್ತು ಗೂಗ್ಲಿ ಸ್ಪೆಷಲಿಸ್ಟ್ ಯಜುವೇಂದ್ರ ಚಹಾಲ್ ಅವರನ್ನು ವಿಶ್ವಕಪ್ಗೆ ಏಕೆ ಆಯ್ಕೆ ಮಾಡಿಲ್ಲ ಎಂಬುದರ ಬಗ್ಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ, ತಂಡದಲ್ಲಿ ಇತ್ತೀಚಿನ ಸಂಯೋಜನೆಯನ್ನು ನೋಡಿದರೆ ಹೆಚ್ಚು ಆಲ್ರೌಂಡರ್ಗಳಿಗೆ ಮಣೆ ಹಾಕಲಾಗುತ್ತಿರುವ ಕಾರಣ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ ಬ್ಯಾಟಿಂಗ್ ಕಾಂಬಿನೇಷನ್ನಲ್ಲಿ 8 ಮತ್ತು 9ನೇ ವಿಕೆಟ್ವರೆಗೂ ಬ್ಯಾಟಿಂಗ್ ಸಾಮರ್ಥ್ಯ ಇರುವುದನ್ನು ಕಾಣುತ್ತೇವೆ. ಇತ್ತೀಚೆಗೆ ಹೆಚ್ಚಿನ ತಂಡಗಳು ಡೆತ್ ಓವರ್ಗಳಲ್ಲಿ ಟೇಲ್ ಎಂಡ್ ಬ್ಯಾಟರ್ಗಳು ಕನಿಷ್ಠ 20 ರನ್ ಗಳಿಸ ಬೇಕು ಎಂದು ಆಪೇಕ್ಷಿಸಲಾಗುತ್ತಿದೆ. ಹೀಗಾಗಿ ಅಕ್ಷರ್ ಪಟೇಲ್ ಮತ್ತು ಜಡೇಜಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ವೇಗದ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಆಲ್ರೌಂಡರ್ಗಳಾಗಿ ಆಯ್ಕೆ ಮಾಡಲಾಗಿದೆ.
2016 ರಿಂದ ಈ ವರೆಗೆ ಚಹಾಲ್ ಏಕದಿನ ಬೌಲಿಂಗ್ ರೆಕಾರ್ಡ್
ಯುಜ್ವೇಂದ್ರ ಚಹಾಲ್ ಅವರ ಏಕದಿನ ವೃತ್ತಿಜೀವನದ ಅಂಕಿ - ಅಂಶಗಳನ್ನು ಗಮನಿಸಿದರೆ 2017 ರಿಂದ 2019ರ ವರೆಗೆ ಪೀಕ್ ಟೈಮ್ ಎಂದು ಪರಿಗಣಿಸಬಹುದಾಗಿದೆ. 2020 ಮತ್ತು 21 ರಲ್ಲಿ ಕೊವಿಡ್ ಕಾರಣಕ್ಕೆ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಆಟಗಾರರಿಗೆ ದೊರೆತಿಲ್ಲ. ಇದಾದ ನಂತರ ಚಹಾಲ್ ತಂಡದ ಆಯ್ಕೆಯ ವಿಚಾರದಲ್ಲಿ ತೆರೆಮರೆಗೆ ಹೋದರು. ಈ ವೇಳೆ, ಅಕ್ಷರ್ ಪಟೇಲ್ ಆಲ್ರೌಂಡರ್ ಮತ್ತು ಸ್ಪಿನ್ನರ್ ಆಗಿ ತಂಡದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಂಡರು. ಆದರೆ 2022 ರಲ್ಲಿ ಚಹಾಲ್ಗೆ ಹೆಚ್ಚಿನ ಅವಕಾಶ ಸಿಕ್ಕಿ ಉತ್ತಮ ಪ್ರರ್ದನ ನೀಡಿದರು.
ಆದರೆ 2023 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಚಹಾಲ್ ಅವರನ್ನು ಏಷ್ಯಾ ಕಪ್ ಮತ್ತು ವಿಶ್ವಕಪ್ ತಂಡಗಳಿಂದ ಕೈಬಿಡಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. 2023 ರಲ್ಲಿ ಅವರು ಕೇವಲ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ ಒಂದು ಪಂದ್ಯ ಮತ್ತು ಇಂದೋರ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದು ಅವರ ಕೊನೆಯ ಪಂದ್ಯವಾಗಿದೆ.
ಯುಜುವೇಂದ್ರ ಚಾಹಲ್ ಅವರ ವೃತ್ತಿಜೀವನ:2016ರಲ್ಲಿ ಭಾರತದ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಚಹಾಲ್ ಕಾಣಿಸಿಕೊಂಡರು. ಆ ವರ್ಷ ಅವರು 3 ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದರು. ಇದರ ನಂತರ, 2017 ರಲ್ಲಿ ಅವರು 14 ಪಂದ್ಯಗಳಲ್ಲಿ 21 ವಿಕೆಟ್ ಪಡೆದರೆ, 2018 ರಲ್ಲಿ ಅವರು 17 ಪಂದ್ಯಗಳಲ್ಲಿ 29 ವಿಕೆಟ್ ಕಬಳಿಸಿದ್ದಾರೆ. 2019 ರಲ್ಲಿ 16 ಪಂದ್ಯಗಳಿಂದ 29 ವಿಕೆಟ್, 2020 ರಲ್ಲಿ ಕೇವಲ 4 ಏಕದಿನ ಆಡಿದ್ದು, ಇದರಲ್ಲಿ ಚಹಾಲ್ 7 ವಿಕೆಟ್ ಪಡೆದಿದ್ದಾರೆ. 2021 ರಲ್ಲಿ 2 ಪಂದ್ಯದಿಂದ ಐದು ವಿಕೆಟ್, 2022 ರಲ್ಲಿ 14 ಮ್ಯಾಚ್ನಿಂದ 12 ಇನ್ನಿಂಗ್ಸ್‌ಗಳಲ್ಲಿ 21 ವಿಕೆಟ್, 2023ರ ಎರಡು ಪಂದ್ಯದಿಂದ 3 ವಿಕೆಟ್ ಉರುಳಿಸಿದ್ದಾರೆ.
ವಿರಾಟ್ ನಾಯಕತ್ವದಲ್ಲಿ ಚಹಾಲ್ ಹೆಚ್ಚು ಅವಕಾಶ:ಚಹಾಲ್ ಐಪಿಎಲ್ನಲ್ಲಿ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ವಿರಾಟ್ ಟೀಮ್ ಇಂಡಿಯಾಕ್ಕೆ ಅವಕಾಶ ಮಾಡಿಸಿಕೊಟ್ಟಿದ್ದರು. ಹೀಗಾಗಿ ವಿರಾಟ್ ನಾಯತಕ್ವದಲ್ಲಿ ಚಹಾಲ್ ಹೆಚ್ಚು ಅವಕಾಶಗಳು ದೊರೆಯುತ್ತಿದ್ದವು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಚಹಾಲ್ 2017 ಮತ್ತು 2020ರ ನಡುವೆ 41 ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 2017 ಮತ್ತು 2023 ರ ನಡುವೆ ಕೇವಲ 17 ಪಂದ್ಯಗಳನ್ನು ಆಡಿದ್ದು, 30 ವಿಕೆಟ್ ತೆಗೆದಿದ್ದಾರೆ. ಇದಲ್ಲದೇ ಧೋನಿ ನಾಯಕತ್ವದಲ್ಲಿ 3 ಪಂದ್ಯ, ಧವನ್ ನಾಯಕತ್ವದಲ್ಲಿ 8 ಹಾಗೂ ಕೆಎಲ್ ರಾಹುಲ್ ನಾಯಕತ್ವದಲ್ಲಿ 3 ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಚಹಾಲ್ ಹೆಚ್ಚು ಅವಕಾಶಗಳನ್ನು ಮಾಡಿಕೊಡಲಾಗುತ್ತಿತ್ತು. ಆದರೆ, ರೋಹಿತ್ ಕ್ಯಾಪ್ಟಂನ್ಸಿಯಲ್ಲಿ ಚಹಾಲ್ ತೆರೆಮರೆಗೆ ಸರಿದಿದ್ದಾರೆ.
ಇದನ್ನೂ ಓದಿ:ICC ODI Rankings: ಏಷ್ಯಾಕಪ್ನಲ್ಲಿ ಭರ್ಜರಿ ಬ್ಯಾಟಿಂಗ್... ಶ್ರೇಯಾಂಕದಲ್ಲಿ ಏರಿಕೆ ಕಂಡ ಭಾರತದ ಯುವ ಜೋಡಿ