ನವದೆಹಲಿ: ಭಾರತ ತಂಡ 2019ರ ವಿಶ್ವಕಪ್ನಲ್ಲಿ ಸೋಲುವುದಕ್ಕೆ ಪ್ರಮುಖ ಕಾರಣ ಯೋಜನೆಗಳ ಕೊರತೆ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ 2019ರ ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ18 ರನ್ಗಳಿಂದ ಸೋಲು ಕಂಡಿತು. ಭಾರತ ತಂಡ ಟೂರ್ನಮೆಂಟ್ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಆದರೆ, ಸೆಮಿಫೈನಲ್ನಲ್ಲಿ ಧೋನಿ ಮತ್ತು ಜಡೇಜಾ ಅವರ ಅರ್ಧಶತಕದ ಹೊರತಾಗಿಯೂ 240 ರನ್ಗಳ ಗುರಿಯನ್ನು ಬೆನ್ನಟ್ಟಲಾಗದೆ ಸೋಲು ಕಂಡಿತ್ತು.
2019ರ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಭಾರತ ತಂಡ ಹೊರಬೀಳಲು ಸರಿಯಾದ ಯೋಜನೆಗಳ ಕೊರತೆ ಕಾರಣ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ದೂಷಿಸಿದ್ದಾರೆ. ತಂಡದಲ್ಲಿನ ಅನಾನುಭವಿಗಳ ಮಧ್ಯಮ ಕ್ರಮಾಂಕ ವಿರಾಟ್ ಕೊಹ್ಲಿ ಬಳಗದ ಟ್ರೋಫಿ ಎತ್ತಿಹಿಡಿಯುವ ಕನಸು ನುಚ್ಚುನೂರಾಗಲೂ ಕಾರಣ ಎಂದು 2007 ಮತ್ತು 2011ರ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಯುವಿ ಹೇಳಿದ್ದಾರೆ.
ನಾವು 2011ರ ವಿಶ್ವಕಪ್ ಗೆದ್ದಾಗ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಆಟಗಾರರನ್ನು ಸೆಟ್ ಮಾಡಿಕೊಂಡಿದ್ದೆವು. 2019ರ ವಿಶ್ವಕಪ್ನಲ್ಲಿ ಅವರು ಸರಿಯಾದ ಯೋಜನೆ ರೂಪಿಸಿಕೊಳ್ಳಲಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಯುವರಾಜ್ ಸಿಂಗ್ ಸ್ಪೋರ್ಟ್ಸ್ 18 ವಾಹಿನಿಯ ಹೋಮ್ ಆಫ್ ಹೀರೋಸ್ ಕಾರ್ಯಕ್ರಮದಲ್ಲಿ ಸಂಜಯ್ ಮಂಜ್ರೇಕರ್ಗೆ ತಿಳಿಸಿದ್ದಾರೆ.