ಕರ್ನಾಟಕ

karnataka

ETV Bharat / sports

ವಿಹಾರಿ ಮಾಡಿದ ತಪ್ಪೇನು, ಅವರನ್ನೇಕೆ ತವರಿನ ಟೆಸ್ಟ್​ಗಳಲ್ಲಿ ಆಡಿಸುವುದಿಲ್ಲ: ಅಜಯ್ ಜಡೇಜಾ ಪ್ರಶ್ನೆ - ಪ್ರಿಯಾಂಕ್ ಪಾಂಚಾಲ್ ಭಾರತ ಎ ತಂಡದ ನಾಯಕ

ಕಳೆದ ಒಂದೆರಡು ವರ್ಷಗಳಿಂದ ಭಾರತ ತಂಡದಲ್ಲಿ ಆಡುತ್ತಿರುವ ಹನುಮ ವಿಹಾರಿಯನ್ನು ನವೆಂಬರ್ 25ರಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ಕೈಬಿಟ್ಟು, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ಎ ತಂಡಕ್ಕೆ ಆಯ್ಕೆ ಮಾಡಿರುವುದಕ್ಕೆ ಮಾಜಿ ಕ್ರಿಕೆಟಿಗ ಅಜಯ ಜಡೇಜಾ ಕಿಡಿಕಾರಿದ್ದಾರೆ.

Ajay Jadeja on vihari drop
ಹನುಮ ವಿಹಾರಿ ಆಯ್ಕೆ ಮಾಡದ್ದಕ್ಕೆ ಅಜಯ್ ಜಡೇಜಾ ಬೇಸರ

By

Published : Nov 23, 2021, 6:40 PM IST

ಮುಂಬೈ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಹನುಮ ವಿಹಾರಿಯವರನ್ನು ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್​ ಸರಣಿಗೆ ಆಯ್ಕೆ ಮಾಡದೇ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ಎ ತಂಡಕ್ಕೆ ಏಕೆ ಆಯ್ಕೆ ಮಾಡಲಾಗಿದೆ. ತವರಿನಲ್ಲಿ ಅವರು ಆಡದಿರುವಂತಹ ತಪ್ಪೇನು ಮಾಡಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಬ್ಯಾಟರ್​ ಅಜಯ್ ಜಡೇಜಾ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದಾರೆ.

ನವೆಂಬರ್ 25ರಿಂದ ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾಗಿ ತನ್ನ 2ನೇ ಸರಣಿಯನ್ನಾಡಲಿದೆ. ಆದರೆ ಈ ಟೆಸ್ಟ್​ಗೆ ಆಯ್ಕೆ ಮಾಡುವಾಗ ವಿದೇಶದಲ್ಲಿ ಅವಕಾಶ ಸಿಕ್ಕಿದಾಗಲೆಲ್ಲಾ ಮಿಂಚಿರುವ ಆಲ್​ರೌಂಡರ್ ಹನುಮ ವಿಹಾರಿಯವರನ್ನು ತಂಡದಿಂದ ಕೈಬಿಡಲಾಗಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ಎ ಪ್ರವಾಸಕ್ಕೂ ಅವರನ್ನು ಕಡೆಗಣಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಅವರನ್ನು ಎ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಸೀನಿಯರ್ ತಂಡದಿಂದ ಕೈಬಿಟ್ಟು ಎ ತಂಡಕ್ಕೆ ಆಯ್ಕೆ ಮಾಡುವ ಅವಶ್ಯಕತೆಯಿತ್ತಾ?

"ವಿಹಾರಿ ಒಬ್ಬ ನತದೃಷ್ಟ, ಅವಕಾಶ ಸಿಕ್ಕಾಗ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕೆಲವು ಸಮಯಗಳಿಂದ ಭಾರತ ತಂಡದಲ್ಲಿದ್ದು, ತುಂಬಾ ಚೆನ್ನಾಗಿ ಆಡಿದ್ದಾರೆ. ಆದರೆ ಅವರೇನು ತಪ್ಪು ಮಾಡಿದ್ದಾರೆ? ಅವರೇಕೆ ಭಾರತ ಎ ಪ್ರವಾಸಕ್ಕೆ ಹೋಗಬೇಕು? ಅವರು ಏಕೆ ತವರಿನ ಟೆಸ್ಟ್​ನಲ್ಲಿ ಆಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಭಾರತ ತಂಡದಲ್ಲಿ ಆಡಿದ ಆಟಗಾರರನ್ನು ನೀಡುವ ಎ ತಂಡದ ಜೊತೆಗೆ ಪ್ರವಾಸಕ್ಕೆ ಕಳುಹಿಸಬೇಡಿ. ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದವರನ್ನು ಕೈಬಿಟ್ಟು ಹೊಸಬರಿಗೆ ತಂಡದಲ್ಲಿ ಅವಕಾಶ ನೀಡಿದಾಗ ಜನರ ಮನಸ್ಸಿನಲ್ಲಿ ತುಂಬಾ ಕೆಟ್ಟ ಭಾವನೆ ಮೂಡಬಹುದು" ಎಂದು ಜಡೇಜಾ ಕ್ರಿಕ್​ಬಜ್​ ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ಹನುಮ ವಿಹಾರಿಯನ್ನು ಬಹುತೇಕ ವಿದೇಶಿ ಪ್ರವಾಸದ ವೇಳೆ ಮಾತ್ರ ಆಡಿಸಲಾಗುತ್ತಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಹ್ಯಾಮ್​ಸ್ಟಿಂಗ್ ನಡುವೆಯೂ ಸುದೀರ್ಘ ಇನ್ನಿಂಗ್ಸ್​ ಸೋಲುವ ಪಂದ್ಯವನ್ನು ಡ್ರಾನಲ್ಲಿ ಅಂತ್ಯವಾಗುವಂತೆ ಮಾಡಿದ್ದರು. ಆದರೂ ಸ್ವದೇಶಿ ಟೆಸ್ಟ್​ ಸರಣಿಯಲ್ಲಿ ಅವರನ್ನು ಮ್ಯಾನೇಜ್​ಮೆಂಟ್​ ತೀರಾ ಕಡೆಗಣಿಸುತ್ತಿರುವುದು ಕೆಲವು ಕ್ರಿಕೆಟ್​ ತಜ್ಞರ ಆಸಮಾಧಾನಕ್ಕೆ ಕಾರಣವಾಗುತ್ತಿದೆ.

ಪ್ರಿಯಾಂಕ್ ಪಾಂಚಾಲ್​ ನೇತೃತ್ವದ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, 4 ದಿನಗಳ 3 ಟೆಸ್ಟ್​ ಪಂದ್ಯಗಳನ್ನಾಡಲಿದೆ.

ಇದನ್ನು ಓದಿ: ಶತಕದ ಬಗ್ಗೆ ಚಿಂತೆಯಿಲ್ಲ, ತಂಡಕ್ಕೆ ಅಗತ್ಯವಾದ ರನ್​ಗಳಿಸುವುದರಲ್ಲೇ ನನಗೆ ತೃಪ್ತಿ: ಚೇತೇಶ್ವರ್​ ಪೂಜಾರ​

ABOUT THE AUTHOR

...view details