ಹೈದರಾಬಾದ್: ಇತ್ತೀಚೆಗೆ ದೇಶದಲ್ಲಿರುವ ಬ್ರಿಟನ್ನ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮಸಾಲೆ ದೋಸೆ ಸವಿದು ಖುಷಿಪಟ್ಟಿದ್ದರು. ಅದರಲ್ಲೂ ತಾವು ತಿಂದ ಮಸಾಲೆ ದೋಸೆಯ ಸವಿಯ ಅನುಭವವನ್ನ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ, ಹಾಗೂ ಮುಖ್ಯಮಂತ್ರಿಗಳಿಗೆ ಕನ್ನಡದಲ್ಲಿಯೇ ನಮಸ್ಕಾರ ಎಂದು ಸಂಬೋಧಿಸಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಮನೆಗೆದ್ದಿದ್ದರು.
ಮತ್ತೆ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಸದ್ಯ ಸುದ್ದಿಯಲ್ಲಿದ್ದು, ಕ್ರಿಕೆಟ್ ದಂತಕಥೆ ಕನ್ನಡಿಗ ರಾಹುಲ್ ದ್ರಾವಿಡ್ರಿಂದ ಕನ್ನಡ ಪಾಠ ಕಲಿತಿದ್ದಾರೆ. ವಾಲ್ ಎಂದೇ ಖ್ಯಾತಿಯಲ್ಲಿರುವ ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರನ್ನ ಭೇಟಿ ಮಾಡಿದ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ರಾಹುಲ್ರಿಂದ ಕನ್ನಡ ಕಲಿಯಲು ಪ್ರಯತ್ನ ಪಟ್ಟಿದ್ದಾರೆ.