ಕೋಲ್ಕತ್ತಾ :ಟೀಂ ಇಂಡಿಯಾ ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಮೊದಲು ಫೀಲ್ಡ್ ಮಾಡಲು ಆಯ್ಕೆ ಮಾಡಿಕೊಂಡಿದೆ. ಎಂದಿನಂತೆ ಉಭಯ ತಂಡಗಳು ಕೆಲವು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿವೆ.
ಇತ್ತೀಚೆಗೆ ನಡೆದ 3 ಏಕದಿನ ಪಂದ್ಯದಲ್ಲಿ 3-0 ಅಂತರಿಂದ ಗೆಲುವು ಸಾಧಿಸುವ ಮೂಲಕ ಎದುರಾಳಿ ತಂಡವನ್ನು ವೈಟ್ ವಾಷ್ ಮಾಡಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ಪಂದ್ಯದಲ್ಲೂ ಅದೇ ಖದರ್ ಮುಂದುವರೆಸಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಇಂದಿನ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ನೇತೃತ್ವದ ಎದುರಾಳಿ ತಂಡ ವೆಸ್ಟ್ ಇಂಡೀಸ್ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳುವ ಮೂಲಕ ಈ ಒತ್ತಡದಿಂದ ಪಾರಾಗುತ್ತಾ ಅಥವಾ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಶರಣಾಗುತ್ತಾ ಅನ್ನೋದನ್ನು ಕಾಡುನೋಡಬೇಕು.