ಫ್ಲೋರಿಡಾ:ಭಾರತದ ತ್ರಿವಳಿ ಸ್ಪಿನ್ನರ್ ಗಳಾದ ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್ ಅವರು ಹೆಣೆದ ಬಲೆಗೆ ಬೀಳುವ ಮೂಲಕ ಕೊನೆಯ, 5ನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಭಾರತದ ಎದುರು 88 ರನ್ಗಳ ಹೀನಾಯ ಸೋಲು ಕಂಡಿತು. ಪಂದ್ಯದಲ್ಲಿ ಸ್ಪಿನ್ನರ್ಗಳು ಎಲ್ಲ 10 ವಿಕೆಟ್ಗಳನ್ನು ಕಬಳಿಸಿದ್ದು ವಿಶೇಷವಾಗಿತ್ತು. ಟಿ-20ಯಲ್ಲಿ ಈ ಸಾಧನೆ ಮೂಡಿ ಬಂದಿದ್ದು ಇದೇ ಮೊದಲಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 188 ರನ್ ಪೇರಿಸಿತು. ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದ ಇಶಾನ್ ಕಿಶನ್ 11 ವಿಫಲವಾದರೆ, ಶ್ರೇಯಸ್ ಅಯ್ಯರ್ ಜೊತೆಗೂಡಿದ ದೀಪಕ್ ಹೂಡಾ ಇನಿಂಗ್ಸ್ ಕಟ್ಟಿದರು. ಅಯ್ಯರ್ 64 ರನ್ ಬಾರಿಸಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಅರ್ಧಶತಕ ಗಳಿಸಿದರು. ಹೂಡಾ 38, ಹಾರ್ದಿಕ್ ಪಾಂಡ್ಯಾ ಅಬ್ಬರದ 28 ರನ್ ಚಚ್ಚಿದರು. ವಿಂಡೀಸ್ನ ಒಡಿಯನ್ ಸ್ಮಿತ್ 3 ವಿಕೆಟ್ ಪಡೆದರು.
ಸ್ಪಿನ್ತ್ರಯರ ಅಸ್ತ್ರಕ್ಕೆ ವಿಂಡೀಸ್ ತತ್ತರ:ಕಠಿಣ ಗುರಿ ಹಿಂದೆ ಬಿದ್ದ ವಿಂಡೀಸ್ಗೆ ಭಾರತದ ಸ್ಪಿನ್ನರ್ಗಳು ದುಸ್ವಪ್ನವಾದರು. ಶಮ್ರಾಹ್ ಬ್ರೂಕ್ಸ್ ಜೊತೆ ಇನಿಂಗ್ಸ್ ಆರಂಭಿಸಿದ ಜಾಸನ್ ಹೋಲ್ಡರ್ಗೆ(0) 3ನೇ ಎಸೆತದಲ್ಲಿಯೇ ಅಕ್ಸರ್ ಪಟೇಲ್ ಕ್ಲೀನ್ಬೌಲ್ಡ್ ಮಾಡಿದರು. ಇದಾದ ಬಳಿಕ ಶಮ್ರಾಹ್ ಬ್ರೂಕ್ಸ್ (13), ಡೆವೋನ್ ಥಾಮಸ್ (10) ರನ್ನೂ ಅಕ್ಸರ್ ಪೆವಿಲಿಯನ್ಗೆ ಅಟ್ಟಿದರು.