ಕರ್ನಾಟಕ

karnataka

ETV Bharat / sports

IND vs WI, 2nd T20: ಟಾಸ್​ ಗೆದ್ದ ಭಾರತ​ ಬ್ಯಾಟಿಂಗ್; ಕುಲದೀಪ್​ ಬದಲು ಬಿಷ್ಣೋಯಿಗೆ ಅವಕಾಶ - ETV Bharath Kannada news

IND vs WI, 2nd T20: ಬ್ಯಾಟಿಂಗ್​ ವೈಫಲ್ಯದಿಂದ ಮೊದಲ ಟಿ20 ಪಂದ್ಯದಲ್ಲಿ ಸೋಲುಂಡಿರುವ ಭಾರತ ಇಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

IND VS WI 2nd T20
IND VS WI 2nd T20

By

Published : Aug 6, 2023, 7:48 PM IST

Updated : Aug 6, 2023, 8:03 PM IST

ಗಯಾನ (ವೆಸ್ಟ್​ ಇಂಡೀಸ್​): ಇಲ್ಲಿನ ಪ್ರಾವಿಡೆನ್ಸ್​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಂಡೀಸ್​ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಮಾಡಿದ್ದಾರೆ. ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು ಕುಲದೀಪ್​ ಯಾದವ್​ ಬದಲಿಗೆ ರವಿ ಬಿಷ್ಣೋಯ್​ ಆಡಲಿದ್ದಾರೆ.

ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಸಣ್ಣ ಗಾಯಕ್ಕೆ ತುತ್ತಾದ ಕಾರಣ ಕುಲದೀಪ್​ ಯಾದವ್​ ಅವರ ಬದಲಾಗಿ ರವಿ ಬಿಷ್ಣೋಯಿ ಅವರನ್ನು ಆಡಿಸಲಾಗುತ್ತಿದೆ ಎಂದು ಹಾರ್ದಿಕ್​ ಪಾಂಡ್ಯ ತಿಳಿಸಿದರು. ವೆಸ್ಟ್​ ಇಂಡೀಸ್​ ತಂಡ ಮೊದಲ ಪಂದ್ಯ ಗೆದ್ದ ತಂಡದೊಂದಿಗೆ ಮೈದಾನಕ್ಕಿಳಿಯಲಿದೆ.

ಪಿಚ್​ ಹೇಗಿದೆ?: ಮಧ್ಯಮ ವೇಗಿಗಳಿಗೆ ಪಿಚ್‌ ಹೆಚ್ಚು ಸಹಕಾರಿ. ಸ್ಪಿನ್​ ಬೌಲರ್​ಗಳೂ ಈ ವಿಕೆಟ್​ನಲ್ಲಿ ಯಶಸ್ಸು ಕಂಡಿದ್ದಾರೆ. ತ್ರಿವಳಿ ಸ್ಪಿನ್ನರ್​​ಗಳ ಜೊತೆಗೆ ಹಾರ್ದಿಕ್​ ಪಾಂಡ್ಯ ಇಂದೂ ಸಹ ಮೊದಲ ಪಂದ್ಯದಂತೆ ವಿಂಡೀಸ್​ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆಯಲ್ಲಿದ್ದಾರೆ. ಇಲ್ಲಿ ನಡೆದಿರುವ 11 ಟಿ20 ಪಂದ್ಯಗಳ ಸ್ಕೋರ್​ ಪ್ರಕಾರ, 123 ಸರಾಸರಿಯ ರನ್​ ಎಂದು ಹೇಳಲಾಗಿದೆ. ಮೊದಲು ಬ್ಯಾಟ್​​ ಮಾಡುತ್ತಿರುವ ಟೀಂ​ ಇಂಡಿಯಾ 150 ಪ್ಲಸ್​ ಸ್ಕೋರ್​ ಕಲೆ ಹಾಕಿದ್ದಲ್ಲಿ ಗೆಲುವು ಸರಳ.

ತಿಲಕ್ ವರ್ಮಾ​ ಮೇಲೆ ಹೆಚ್ಚಿನ ನಿರೀಕ್ಷೆ: ಪಾದಾರ್ಪಣೆ ಪಂದ್ಯದಲ್ಲಿ 39 ರನ್​ ಗಳಿಸಿದ ತಿಲಕ್​ ವರ್ಮಾ ಮೇಲೆ ಇಂದು ಹೆಚ್ಚು ನಿರೀಕ್ಷೆ ಇದೆ. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಉತ್ತಮ ಬ್ಯಾಟಿಂಗ್​ ಮೂಲಕ ಮಿಂಚಿದ್ದ ಯುವ ಬ್ಯಾಟರ್​ಗೆ ಈ ಸರಣಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಅಗತ್ಯವಿದೆ.

ಮೊದಲ ಪಂದ್ಯ ಹೀಗಿತ್ತು..: ಲಾರಾ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 4 ರನ್​ನಿಂದ ಸೋಲು ಕಂಡಿತ್ತು. ವೆಸ್ಟ್​ ಇಂಡೀಸ್​ ನೀಡಿದ್ದ 150 ರನ್​ಗಳ ಗುರಿ ಬೆನ್ನತ್ತಿದ್ದ ಭಾರತ, ಸತತ ವಿಕೆಟ್​ ನಷ್ಟದಿಂದ ನಿಗದಿತ ಓವರ್‌ಗಳ​ ಅಂತ್ಯಕ್ಕೆ 9 ವಿಕೆಟ್​ ನಷ್ಟ ಅನುಭವಿಸಿ 145 ರನ್‌ ಗಳಿಸಲಷ್ಟೇ ಸಾಧ್ಯವಾಗಿತ್ತು. ಇದರಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಹಿನ್ನಡೆ ಅನುಭವಿಸಿದೆ.

ತಂಡಗಳು ಇಂತಿವೆ..ಭಾರತ: ಇಶಾನ್ ಕಿಶನ್ (ವಿಕೆಟ್​ ಕೀಪರ್​), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್

ವೆಸ್ಟ್ ಇಂಡೀಸ್:ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಇದನ್ನೂ ಓದಿ:IND vs WI 2nd T20: ಮೊದಲ ಪಂದ್ಯದ ಸೋಲಿನ ಸೇಡು ತೀರಿಸಲು ಹಾರ್ದಿಕ್​ ​ಪಡೆ ರೆಡಿ.. ಅಬ್ಬರಿಸಬೇಕಿದೆ ಐಪಿಎಲ್​ ಸ್ಟಾರ್ಸ್​

Last Updated : Aug 6, 2023, 8:03 PM IST

ABOUT THE AUTHOR

...view details