ಗಯಾನ (ವೆಸ್ಟ್ ಇಂಡೀಸ್):ಐಪಿಎಲ್ನ ಸ್ಟಾರ್ ಬ್ಯಾಟರ್ಗಳನ್ನು ಒಳಗೊಂಡಿರುವ ಭಾರತ ತಂಡ ಇಂದು ವಿಂಡೀಸ್ ವಿರುದ್ಧ ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯವನ್ನು ನಾಲ್ಕು ರನ್ನಿಂದ ಸೋಲು ಕಂಡಿರುವ ಹಾರ್ದಿಕ್ ಪಡೆ ಇಂದು ಪುಟಿದೇಳುವ ಭರವಸೆಯಲ್ಲಿದೆ. ಐದು ಟಿ20 ಪಂದ್ಯದ ಸರಣಿಯಲ್ಲಿ ವಿಂಡೀಸ್ 1-0ಯಿಂದ ಮುನ್ನಡೆಯನ್ನು ಸಾಧಿಸಿದೆ.
ಐಪಿಎಲ್ನಲ್ಲಿ ಮಿಂಚಿದ ಸ್ಟಾರ್ ಆಟಗಾರರ ಬಳಗವನ್ನು ಭಾರತ ತಂಡ ಹೊಂದಿದೆ. ವೆಸ್ಟ್ ಇಂಡೀಸ್ ಮೈದಾನದಲ್ಲಿ ಇವರು ಬ್ಯಾಟಿಂಗ್ನಲ್ಲಿ ಮಿಂಚ ಬೇಕಾಗಿದೆ. ಮೊದಲ ಪಂದ್ಯದಲ್ಲಿ ಕಂಡ ಬ್ಯಾಟಿಂಗ್ ವೈಫಲ್ಯವನ್ನು ಮರುಕಳಿಸದಂತೆ ನೋಡಿಕೊಳ್ಳುವುದು ಟೀಮ್ ಇಂಡಿಯಾದ ಮೇಲಿರುವ ಜವಾಬ್ದಾರಿಯಾಗಿದೆ.
ಸ್ಕೋರ್ ಮಾಡಬೇಕಿದೆ ಆರಂಭಿಕರು: ಮೊದಲ ಪಂದ್ಯದಲ್ಲಿ ಆರಂಭಿಕರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ವೈಫಲ್ಯವನ್ನು ಕಂಡಿದ್ದರು. ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಪಡೆದ ಆಟಗಾರ ಗಿಲ್ ಅಂತಾರಾಷ್ಟ್ರೀಯ ಮ್ಯಾಚ್ನಲ್ಲಿ ಅದೇ ಫಾರ್ಮ್ನ್ನು ಮುಂದುವರೆಸಬೇಕಿದೆ. ಇಶಾನ್ ಕಿಶನ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸತತ ನಾಲ್ಕು ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದಾರೆ. ಆದರೆ ಅದೇ ಫಾರ್ಮ್ನ್ನು ಟಿ20 ಸರಣಿಯಲ್ಲಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಸಂಜು, ಸೂರ್ಯ ಮೇಲೆ ನಿರೀಕ್ಷೆ: ಪ್ರಥಮ ಪಂದ್ಯದಲ್ಲಿ 39 ರನ್ ಗಳಿಸಿದರುವ ತಿಲಕ್ ವರ್ಮಾ ಮೇಲೆ ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆ ಹಾಕುವ ಭರವಸೆ ಇದೆ. ಆದರೆ ಟಿ20 ಅಗ್ರ ಶ್ರೇಯಾಂಕದ ಬ್ಯಾಟರ್ ತಮ್ಮ ಛಾಪನ್ನು ಮತ್ತೆ ತೋರಿಸುವ ಅಗತ್ಯವಿದೆ. ಅವರ ಬ್ಯಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸುತ್ತಿಲ್ಲ. ಏಕದಿನದಲ್ಲೂ ಅವರು ಸೂರ್ಯ ಮಂಕಾಗಿದ್ದರು. ದೊಡ್ಡ ಅಂತರದ ನಂತರ ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್ ಏಕದಿನ ಪಂದ್ಯದಲ್ಲಿ 51 ರನ್ ಗಳಿಸಿ ಫಾರ್ಮ್ನ್ನು ತೋರಿದ್ದಾರೆ. ಅದೇ ಲಯವನ್ನು ಟಿ20ಯಲ್ಲಿ ಮುಂದುವರೆಸ ಬೇಕಿದೆ.
ಅಕ್ಷರ್ಗೆ ಬೆಂಚ್?:ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳ ಜೊತೆ ಮೈದಾನಕ್ಕಿಳಿದ ಹಾರ್ದಿಕ್ ಇಂದು ಈ ಕಾಂಬಿನೇಷನ್ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಇಬ್ಬರು ಸ್ಪಿನ್ನರ್ ಮತ್ತು ಇಬ್ಬರು ಮುಖ್ಯ ವೇಗದ ಬೌಲಿಂಗ್ ಜೊತೆ ಮೈದಾನಕ್ಕಿಳಿಯುವ ಆಲೋಚನೆ ಮಾಡುವ ನಿರೀಕ್ಷೆ ಇದೆ. ಅದರಂತೆ ಒಬ್ಬ ಬ್ಯಾಟರ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಉಂಟಾಗಲಿದೆ. ಇದರಿಂದ ಯಶಸ್ವಿ ಜೈಸ್ವಾಲ್ ಆಡಲು ಅವಕಾಶ ಸಿಕ್ಕರೆ ಅಚ್ಚರಿ ಏನಿಲ್ಲ. ಅಥವಾ ಅವೇಶ್ ಖಾನ್, ಮಲಿಕ್ ಮೈದಾನದಲ್ಲಿ ಕಾಣಿಸಿಕೊಳ್ಳಬಹುದು. ಹಾರ್ದಿಕ್ ಪಾಂಡ್ಯ ತಮ್ಮ ಕೋಟಾದ ನಾಲ್ಕು ಓವರ್ಗಳನ್ನು ಮಾಡಿದಲ್ಲಿ ಮತ್ತೊಬ್ಬ ಬೌಲರ್ಗೆ ಸ್ಥಾನ ಸಿಗುವುದು ಅನುಮಾನ.