ಪೋರ್ಟ್ ಆಫ್ ಸ್ಪೇನ್(ಟ್ರಿನಿಡಾಡ್):ಟೀಂ ಇಂಡಿಯಾ ಆರಂಭಿಕ ಆಟಗಾರರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 308ರನ್ಗಳಿಕೆ ಮಾಡಿದೆ. ಈ ಮೂಲಕ ವೆಸ್ಟ್ ಇಂಡೀಸ್ ಗೆಲುವಿಗೆ 309ರನ್ ಟಾರ್ಗೆಟ್ ನೀಡಿದೆ. ತಂಡದ ಪರ ಕ್ಯಾಪ್ಟನ್ ಧವನ್, ಶುಬ್ಮನ್ ಗಿಲ್ ಹಾಗೂ ಅಯ್ಯರ್ ಅರ್ಧಶತಕ ಸಿಡಿಸಿ ಮಿಂಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ ಧವನ್ ಹಾಗೂ ಗಿಲ್ ಜೋಡಿ 119ರನ್ಗಳ ಮಹತ್ವದ ಜೊತೆಯಾಟವಾಡಿತು. 53 ಎಸೆತಗಳಲ್ಲಿ 64ರನ್ಗಳಿಸಿದ ಗಿಲ್ ಔಟಾದರೆ, ಧವನ್ 97ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ 54ರನ್ಗಳಿಕೆ ಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಕುಸಿತ: ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಸೂರ್ಯಕುಮಾರ್ ಯಾದವ್(13), ಸ್ಯಾಮ್ಸನ್(12), ದೀಪಕ್ ಹೂಡಾ(27), ಅಕ್ಸರ್ ಪಟೇಲ್(21), ಶಾರ್ದೂಲ್(7) ರನ್ಗಳಿಸಿದರು. ಈ ಮೂಲಕ ತಂಡ ಕೊನೆಯದಾಗಿ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 308ರನ್ಗಳಿಸಿತು.
ವೆಸ್ಟ್ ಇಂಡೀಸ್ ಪರ ಜೋಸೆಪ್,ಗುಡಕೇಶ್ ಮೋಟಿ ಎರಡು ವಿಕೆಟ್ ಪಡೆದುಕೊಂಡರೆ, ಶೆಪಾರ್ಡ್ ಹಾಗೂ ಹುಸೈನ್ ತಲಾ 1 ವಿಕೆಟ್ ಕಿತ್ತರು.
ಪ್ರವಾಸಿ ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಕೆರಿಬಿಯನ್ ಬಳಗ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಅನುಭವಿ ಹಾಗೂ ಪ್ರಮುಖ ಆಟಗಾರರ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ಭಾರತ ತಂಡವನ್ನ ಶಿಖರ್ ಧವನ್ ಮುನ್ನಡೆಸುತ್ತಿದ್ದು, ವೆಸ್ಟ್ ಇಂಡೀಸ್ ಸವಾಲು ಎದುರಿಸಲಿದೆ.