ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಎಂದರೆ ವಿಶ್ವದ ಇತರ ದೇಶದ ಆಟಗಾರರು ಹೆದರುವ ಪರಿಸ್ಥಿತಿ ಇತ್ತು. ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವುದೆಂದರೆ ಅದೊಂದು ದೊಡ್ಡ ಸವಾಲಿನ ಮಾತಾಗಿತ್ತು. 1975 ಮತ್ತು 1979ರಲ್ಲಿ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ಈ ಬಾರಿ ಅರ್ಹತೆಯನ್ನೇ ಗಳಿಸಿಲ್ಲ. ಆ ಸಮಯದಲ್ಲಿ ವೆಸ್ಟ್ ಇಂಡೀಸ್ ತಂಡ ದಿಗ್ಗಜ ಆಟಗಾರರನ್ನು ಹೊಂದಿತ್ತು. ಪ್ರಸ್ತುತ ತಂಡದ ಆಟಗಾರರು ಬಲಿಷ್ಠವಾಗಿಯೇ ಇದ್ದಾರೆ. ಆದರೆ ದೇಶಕ್ಕಾಗಿ ಆಡುತ್ತಿಲ್ಲ ಎಂಬ ಆರೋಪ ಅವರ ಮೇಲಿದೆ.
ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಎಂಬುದು ಅತಿ ಹೆಚ್ಚು ಜನರು ವೀಕ್ಷಿಸುವ ಕ್ರೀಡೆಯಾಗಿದೆ. ಅದಲ್ಲೂ ಟಿ20 ಮಾದರಿಯನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಿಂದ ಲೀಗ್ ಪಂದ್ಯಗಳು ಹೆಚ್ಚಾಗುತ್ತಿವೆ. ಒಂದು ಕಾಲದಲ್ಲಿ ಬಿಗ್ಬ್ಯಾಷ್ ಲೀಗ್ ಮತ್ತು ಐಪಿಎಲ್ ಬಿಟ್ಟರೆ ಮತ್ತಾವ ಲೀಗ್ ಪಂದ್ಯಗಳೂ ದೊಡ್ಡ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿರಲಿಲ್ಲ. ಆದರೆ, ಐಪಿಎಲ್ನ ಖ್ಯಾತಿಯಿಂದ ಈಗ ಹೆಚ್ಚಿನ ದೇಶಗಳಲ್ಲಿ ಲೀಗ್ ಕ್ರಿಕೆಟ್ಗಳು ನಡೆಯುತ್ತವೆ. ಇದರಿಂದ ಕ್ರಿಕೆಟ್ ಆಟಗಾರರಿಗೆ ಪರ್ಯಾಯ ಸಂಪಾದನೆ ಸಿಕ್ಕಂತಾಗಿದೆ. ಇದರ ಲಾಭವನ್ನು ಪಡೆದುಕೊಂಡ ಆಟಗಾರರು ಕೇವಲ ಲೀಗ್‌ಗಳಲ್ಲಿ ಮಾತ್ರ ಆಡುತ್ತಿದ್ದು, ರಾಷ್ಟ್ರೀಯ ತಂಡಲ್ಲಿ ಆಟಲು ಇಷ್ಟ ಪಡುತ್ತಿಲ್ಲ. ಏಕೆಂದರೆ ರಾಷ್ಟ್ರೀಯ ತಂಡದಲ್ಲಿನ ಸಂಭಾವನೆಗೂ ಮೀರಿ ಲೀಗ್‌ಗಳಲ್ಲಿ ಸಿಗುತ್ತಿದೆ.
ಕೇವಲ ಎರಡು ತಿಂಗಳ ಐಪಿಎಲ್ನಲ್ಲಿ ಪೂರನ್ ಸುಮಾರು 8 ಪಟ್ಟು ಹೆಚ್ಚು ಮತ್ತು ಹೆಟ್ಮೆಯರ್ 4 ಪಟ್ಟು ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ. ಶಿಮ್ರಾನ್ ಹೆಟ್ಮೆಯರ್ ಅವರು ರಾಜಸ್ಥಾನ ರಾಯಲ್ಸ್‌ನಿಂದ ಗಳಿಸಿದ ರೂ 8.50 ಕೋಟಿ ವಾರ್ಷಿಕ ಐಪಿಎಲ್ ಶುಲ್ಕ ಪಡೆದರೆ, ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಆಂಡ್ರೆ ರಸೆಲ್ ಅವರ ರೂ 16 ಕೋಟಿ ಪಡೆಯುತ್ತಾರೆ. ಹೀಗಾಗಿ ಅವರು ರಾಷ್ಟ್ರೀಯ ತಂಡದಲ್ಲಿ ಆಡುತ್ತಲೇ ಇಲ್ಲ. ಹಣವೇ ಮುಖ್ಯವಾದ್ದರಿಂದ ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ (CWI) ವರ್ಷವಿಡೀ ಆಟವಾಡಲು ಉನ್ನತ ಆಟಗಾರರನ್ನು ಆಸಕ್ತಿ ವಹಿಸುವುದರಿಂದ ದೊಡ್ಡ ಅಡಚಣೆಯನ್ನು ಸೃಷ್ಟಿಸಿದೆ.