ಕರ್ನಾಟಕ

karnataka

ETV Bharat / sports

ಟಿ20ಯಲ್ಲಿ ವಿಂಡೀಸ್​ ಖದರ್ : ದಕ್ಷಿಣ ಆಫ್ರಿಕಾವನ್ನು ಧೂಳೀಪಟ ಮಾಡಿದ ದೈತ್ಯ ಪಡೆ! - ಎವಿನ್ ಲೂಯಿಸ್​ ಅರ್ಧಶತಕ

ಫ್ಲೆಚರ್​ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ ಸೇರಿದಂತೆ 30 ರನ್​ ಗಳಿಸಿದರೆ, ಲೂಯಿಸ್ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್​ಗಳ ಸಹಿತ 71 ರನ್​ಗಳಿಸಿದರು. ಕ್ರಿಸ್ ಗೇಲ್ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ ಅಜೇಯ 32 ಮತ್ತು ರಸೆಲ್ 12 ಎಸೆತಗಳಲ್ಲಿ 23 ರನ್​ಗಳಿಸಿ ಗೆಲುವಿನ ದಡ ಸೇರಿದರು..

west Indies vs South Africa
west Indies vs South Africa

By

Published : Jun 27, 2021, 4:11 PM IST

ಗ್ರೆನೆಡಾ :ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ಪರಾಕ್ರಮ ತೋರಿದ ವೆಸ್ಟ್ ಇಂಡೀಸ್​ ಬ್ಯಾಟ್ಸ್​ಮನ್​ಗಳು ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ನಾಲ್ಕು ವರ್ಷಗಳ ನಂತರ ಒಂದಾಗಿ ಆಡಿದ ಕ್ರಿಸ್​ ಗೇಲ್​, ರಸೆಲ್, ಪೊಲಾರ್ಡ್​ ಮತ್ತು ಬ್ರಾವೋ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 160 ರನ್​ಗಳಿಸಿತ್ತು. ವ್ಯಾನ್ ಡರ್ ಡಾಸ್ಸೆನ್ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ ಆಜೇಯ 56 ರನ್​ಗಳಿಸಿ ತಂಡದ ಗರಿಷ್ಠ ರನ್​ ಸ್ಕೋರರ್ ಎನಿಸಿದರು. ಡಿಕಾಕ್ 37 ಮತ್ತು ರೀಜಾ ಹೆಂಡ್ರಿಕ್ಸ್​ 17, ನಾಯಕ ಬವೂಮ 22 ರನ್​ಗಳಿಸಿದರು.

ವಿಂಡೀಸ್​ ಪರ ಫ್ಯಾಬಿಯನ್ ಅಲೆನ್ 18ಕ್ಕೆ 2, ರಸೆಲ್ 29ಕ್ಕೆ1, ಡಿಜೆ ಬ್ರಾವೋ 30ಕ್ಕೆ 2, ಹೋಲ್ಡರ್​ 29ಕ್ಕೆ1 ವಿಕೆಟ್​ ಪಡೆದು ಹರಿಣಗಳನ್ನು ಕಟ್ಟಿಹಾಕಿದರು.

161 ರನ್​ಗಳ ಗುರಿ ಪಡೆದ ವೆಸ್ಟ್​ ಇಂಡೀಸ್ ಕೇವಲ 15 ಓವರ್​ಗಳಲ್ಲೇ ಗುರಿ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಆ್ಯಂಡ್ರೆ ಫ್ಲೆಚರ್​ ಮತ್ತು ಎವಿನ್ ಲೂಯಿಸ್​ ಮೊದಲ ವಿಕೆಟ್​ಗೆ 7 ಓವರ್​ಗಳಲ್ಲಿ 85 ರನ್​ಗಳ ಸೂರೆಗೈದರು.

ಫ್ಲೆಚರ್​ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ ಸೇರಿದಂತೆ 30 ರನ್​ ಗಳಿಸಿದರೆ, ಲೂಯಿಸ್ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್​ಗಳ ಸಹಿತ 71 ರನ್​ಗಳಿಸಿದರು. ಕ್ರಿಸ್ ಗೇಲ್ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ ಅಜೇಯ 32 ಮತ್ತು ರಸೆಲ್ 12 ಎಸೆತಗಳಲ್ಲಿ 23 ರನ್​ಗಳಿಸಿ ಗೆಲುವಿನ ದಡ ಸೇರಿದರು.

ಇದನ್ನು ಓದಿ: England vs Sri Lanka T-20: ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಇಂಗ್ಲೆಂಡ್​

ABOUT THE AUTHOR

...view details