ದುಬೈಹಾಲಿ ಟಿ20 ವಿಶ್ವ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಎಂದು ಮಾಜಿ ವೆಸ್ಟ್ ನಾಯಕ ಡರೇನ್ ಸಾಮಿ ಅಭಿಪ್ರಾಯಪಟ್ಟಿದ್ದಾರೆ.
ವೆಸ್ಟ್ ಇಂಡೀಸ್ 2012 ಮತ್ತು 2016ರಲ್ಲಿ ಚುಟುಕು ವಿಶ್ವಕಪ್ ಜಯಿಸಿತ್ತು. ಭಾರತದಲ್ಲಿ ನಡೆದಿದ್ದ 2016ರ ಫೈನಲ್ನಲ್ಲಿ ಬ್ರಾತ್ವೇಟ್ ಕೊನೆಯ ಓವರ್ನಲ್ಲಿ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿ ಇಂಗ್ಲೆಂಡ್ ವಿರುದ್ಧ ನಾಟಕೀಯ ಗೆಲುವು ತಂದುಕೊಟ್ಟಿದ್ದರು.
ಇದನ್ನೇಳಲು ನಾನು ಹೆಚ್ಚೇನು ತಲೆ ಕೆಡಿಸಿಕೊಳ್ಳಬೇಕಿಲ್ಲ, ವೆಸ್ಟ್ ಇಂಡೀಸ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಹೋಗಲಿದೆ ಎಂದು ಐಸಿಸಿ ಡಿಜಿಟಲ್ ಶೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
" ಕೆಲವು ಜನರಿಗೆ ನನ್ನ ಮಾತು ಪಕ್ಷಪಾತದಿಂದ ಕೂಡಿದೆ ಎನ್ನಿಸಬಹುದು. ಆದರೆ ನೀವು ಮೂರ್ನಾಲ್ಕು ಟೂರ್ನಮೆಂಟ್‌ಗಳಲ್ಲಿ ನಾವು ಅಗ್ರ ನಾಲ್ಕು ತಂಡಗಳಲ್ಲಿ ಒಂದಾಗುವಲ್ಲಿ ಯಶಸ್ವಿಯಾಗಿದ್ದೇವೆ. ಅದರಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದೇವೆ" ಎಂದಿದ್ದಾರೆ.
" ನಮ್ಮ ಆಟಗಾರರು ಅಗಾಧ ಸಾಮರ್ಥ್ಯವುಳ್ಳವರಾಗಿದ್ದಾರೆ. ನಾಯಕ ಪೊಲಾರ್ಡ್ ತಂಡಕ್ಕೆ ಮರಳಿದ್ದಾರೆ. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಎವಿನ್ ಲೂಯಿಸ್ ಹೀಗೆ ಎದುರಾಳಿಗಳ ಮೇಲೆ ದಾಳಿ ಮಾಡಬಲ್ಲ ಆಟಗಾರರ ಪಟ್ಟಿಯೇ ಬೆಳೆಯುತ್ತಾ ಸಾಗುತ್ತದೆ ಎಂದು 37ರ ಹರೆಯದ ಡ್ಯಾರೆನ್ ಸಮಿ ತಿಳಿಸಿದ್ದಾರೆ.
ಯುಎಇ ಮತ್ತು ಒಮಾನ್ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕೂಡ ವಿಶ್ವ ಟಿ20 ಪ್ರಶಸ್ತಿಯನ್ನು ಗೆಲ್ಲಲು ಬಯಸುತ್ತವೆ. ಇಂಗ್ಲೆಂಡ್ ಕಳೆದ ಬಾರಿಯ ಫೈನಲಿಸ್ಟ್ ಕೂಡ ಆಗಿದೆ. ಇನ್ನು ಆಸ್ಟ್ರೇಲಿಯಾ ಕೂಡ ಅದ್ಭುತ ಆಟಗಾರರನ್ನು ಹೊಂದಿದ್ದು, ಐಪಿಎಲ್ನಲ್ಲಿ ಆಡುವುದರಿಂದ ಇಲ್ಲಿನ ಪರಿಸ್ಥಿತಿಯನ್ನು ಹೊಂದಿಕೊಂಡು ಉತ್ತಮ ಪ್ರದರ್ಶನ ತೋರಬಹುದು ಎಂದಿದ್ದಾರೆ.
ನನ್ನ ಅಭಿಪ್ರಾಯದ ಪ್ರಕಾರ ಇಲ್ಲಿನ ಪಿಚ್ಗಳು ಭಾರತ ಮತ್ತು ಕೆರಿಬಿಯನ್ ಹೋಲುವ ಸ್ಥಳಗಳಾಗಿವೆ. ಆ ತಂಡಗಳ ಆಟಗಾರರು ಕೂಡ ಇಲ್ಲಿನ ಪರಿಸ್ಥಿತಿಗೆ ಬೇಗ ಹೊಗ್ಗಿಕೊಳ್ಳಲಿದ್ದಾರೆ ಎಂದು ಸಾಮಿ ತಿಳಿಸಿದ್ದಾರೆ.
ಇದನ್ನು ಓದಿ:ಭಾರತದ ಜತೆಗೆ ಈ ತಂಡವೇ ಫೈನಲ್ ಪ್ರವೇಶಿಸುವ ನನ್ನ ನೆಚ್ಚಿನ ತಂಡ : ದಿನೇಶ್ ಕಾರ್ತಿಕ್