ಲೀಡ್ಸ್: ಭಾರತ ತಂಡದ ಯುವ ವಿಕೆಟ್ ಕಿಪರ್ ರಿಷಭ್ ಪಂತ್ ಬೆನ್ನಿಗೆ ಮತ್ತೊಮ್ಮೆ ನಿಂತಿರುವ ನಾಯಕ ಕೊಹ್ಲಿ, ಟೀಮ್ ಮ್ಯಾನೇಜ್ಮೆಂಟ್ ಈ ಸರಣಿ ಉಳಿದ ಪಂದ್ಯಗಳಲ್ಲೂ ಪಂತ್ಗೆ ಅಗತ್ಯವಾದ ಸ್ವಾತಂತ್ರ್ಯವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
23 ವರ್ಷದ ರಿಷಭ್ ಪಂತ್ ಈ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ. ಅವರು ನಾಟಿಂಗ್ಹ್ಯಾಮ್ನಲ್ಲಿ 25, ಲಾರ್ಡ್ಸ್ನಲ್ಲಿ 37 ಮತ್ತು 22, ಲೀಡ್ಸ್ನಲ್ಲಿ 2 ಮತ್ತು 1 ರನ್ಗೆ ಸೇರಿದಂತೆ ಒಟ್ಟು 5 ಇನ್ನಿಂಗ್ಸ್ಗಳಿಂದ 87 ರನ್ ಗಳಿಸಿದ್ದಾರೆ. ಆದರೂ ಕೊಹ್ಲಿ ಯುವ ವಿಕೆಟ್ ಕೀಪರ್ ಪರ ಮಾತನಾಡಿದ್ದು, ಮುಂದಿನ ಪಂದ್ಯಗಳಲ್ಲಿ ಪಂತ್ ಪರ ಟೀಮ್ ಮ್ಯಾನೇಜ್ಮೆಂಟ್ ನಿಲ್ಲಲಿದೆ ಎಂದಿದ್ದಾರೆ.
ನಾನು ಮೊದಲೇ ಹೇಳಿದಂತೆ, ಒಂದು ಪಂದ್ಯದ ಸೋಲಿನೊಂದಿಗೆ ಯಾರೊಬ್ಬರನ್ನು ನಿರ್ಣಯಿಸಲು ಸಾಧ್ಯವಿಲ್ಲ ಅಥವಾ ನಾಯಕನಾಗಿ ತಂಡದ ಸಂಯೋಜನೆ ಬಗ್ಗೆ ವಿಶ್ಲೇಷಿಸಲು ಸಾಧ್ಯವಿಲ್ಲ. ಖಂಡಿತ ಟೀಮ್ ಮ್ಯಾನೇಜ್ಮೆಂಟ್ ಕೂಡ ಅದರ ಬಗ್ಗೆ ವಿಶ್ಲೇಷಿಸಲು ಬಯಸುವುದಿಲ್ಲ, ಏಕೆಂದರೆ ನಾವು ಒಂದು ತಂಡವಾಗಿ ಸತತವಾಗಿ ನಾವು ಸೋಲು ಕಂಡಿಲ್ಲ. ನಾವು ಈ ಪಂದ್ಯವನ್ನು ಒಂದು ತಂಡವಾಗಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ, ಅದಕ್ಕೆ ನಾವು ಅದರ ಜವಾಬ್ದಾರಿ ಹೊರಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.