ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ತಂಡವನ್ನು ಈಗಾಗಲೇ ಸೋಲಿಸಿದ್ದೇವೆ: ಸೆಮಿಫೈನಲ್‌ ಗೆಲ್ಲುವ ಆತ್ಮವಿಶ್ವಾಸದಲ್ಲಿ ರೋಹಿತ್ ಶರ್ಮಾ - ಸೆಮಿಫೈನಲ್‌ ಪ್ರವೇಶ ಪಡೆದ ತಂಡಗಳು

ಅಡಿಲೇಡ್​ನಲ್ಲಿ ಭಾರತವು ಇಂಗ್ಲೆಂಡ್‌ ತಂಡದ ವಿರುದ್ಧ ಸೆಣಸಲಿದ್ದು ನಾಯಕ ರೋಹಿತ್ ಶರ್ಮಾ ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

We overcame England at their home, gives us confidence: Rohit ahead of SF clashWe overcame England at their home, gives us confidence: Rohit ahead of SF clash
We overcame England at their home, gives us confidence: Rohit ahead of SF clash

By

Published : Nov 9, 2022, 2:00 PM IST

ಅಡಿಲೇಡ್ (ಆಸ್ಟ್ರೇಲಿಯಾ): ಇಂಗ್ಲೆಂಡ್‌ ವಿರುದ್ಧ ನಾಳೆ (ನವೆಂಬರ್‌ 10 ರಂದು ಗುರುವಾರ) ನಡೆಯಲಿರುವ ಸೆಮಿಫೈನಲ್‌ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದ್ದು, ನಾಯಕ ರೋಹಿತ್ ಶರ್ಮಾ ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಅಡಿಲೇಡ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ತವರಿನಲ್ಲಿ ಈ ಹಿಂದೆ ನಡೆದ ಸರಣಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಲಾಗಿದೆ. ಅದೇ ಉತ್ಸಾಹದಲ್ಲಿರುವ ತಂಡ ಸೆಮಿಫೈನಲ್​​ನಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ ಎಂದು ಹೇಳಿದರು.

ನಮಗೆ ಟಿ20 ಕ್ರಿಕೆಟ್‌ನ ಸ್ವರೂಪ ತಿಳಿದಿದೆ. ಆದರೆ, ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವುದು ಒಂದು ಸವಾಲಾಗಿತ್ತು. ನಾವು ಅದನ್ನು ಈಗಾಗಲೇ ಮಾಡಿದ್ದೇವೆ. ಹಾಗಾಗಿ ಮತ್ತೆ ಅದೇ ಉತ್ಸಾದಲ್ಲಿದ್ದೇವೆ ಎಂದು ಟಿ20 ವಿಶ್ವಕಪ್​ ಎತ್ತಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ತಂಡದ ಆಟಗಾರರ ಕೊಡುಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ನಾವು ಬಯಸಿದ್ದನ್ನು ಮಾಡಲು ಇದು ನಮಗೆ ಸಿಕ್ಕಿರುವ ಉತ್ತಮ ಅವಕಾಶ. ಈ ಸರಣಿಯುದ್ದಕ್ಕೂ ತಂಡ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ನಮಗೆ ಸಂಪೂರ್ಣ ನಂಬಿಕೆ ಇದೆ. ಸೆಮಿಫೈನಲ್‌ ಪಂದ್ಯದಲ್ಲೂ ಈ ಪ್ರದರ್ಶನ ಮುಂದುವರೆಸುವ ಭರವಸೆ ನನಗಿದೆ. ನಮ್ಮ ಆಟದ ಬಗ್ಗೆ ನಮಗೆ ಅತ್ಯಂತ ಗೌರವವೂ ಇದೆ. ಇದು ಬ್ಯಾಟ್ ಮತ್ತು ಬಾಲ್ ನಡುವಿನ ಸ್ಪರ್ಧೆ ಆಗಿದ್ದರಿಂದ ಏಳು-ಬೀಳು ಸಹಜ ಎಂದು ರೋಹಿತ್ ಹೇಳಿದರು.

ನಾಕೌಟ್‌ ಹಂತದಲ್ಲಿ ನಾವು ತೋರಿರುವ ಉತ್ತಮ ಪ್ರದರ್ಶನ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತಂಡದ ಎಲ್ಲಾ ಆಟಗಾರರೂ ಹುಮ್ಮಸ್ಸಿನಲ್ಲಿದ್ದು, ಇಂಗ್ಲೆಂಡ್‌ ವಿರುದ್ಧ ಜಯ ನಮ್ಮದಾಗಲಿದೆ ಎಂದರು. ಇದೇ ವೇಳೆ ಕೆಲವು ಸಲಹೆಗಳನ್ನು ನೀಡಿದ ಅವರು, ಆಟಗಾರರು ಹೆಮ್ಮೆಯಿಂದ ಆಡಬೇಕು. ಯಾವುದೇ ಆಟಗಾರ ಒಂದು ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದರೆ, ಅದು ಆತನ ಸಾಮರ್ಥ್ಯವನ್ನು ಅಳೆಯುವ ಮಾನದಂಡವಾಗಬಾರದು ಎಂದರು.

ಭಾರತ ತಂಡವು ಕಳೆದ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು. ಸೂರ್ಯಕುಮಾರ್‌ ಯಾದವ್‌ ಮೂರು ಪಂದ್ಯಗಳಲ್ಲಿ ಒಟ್ಟು 171 ರನ್‌ ಗಳಿಸಿದ್ದರು. ಭಾರತ ತಂಡದ ಪ್ರಮುಖ ವೇಗಿ ಭುವನೇಶ್ವರ್‌ ಕುಮಾರ್‌ ಈ ಪಂದ್ಯಾವಳಿಯ ಮ್ಯಾನ್‌ ಆಫ್‌ ದಿ ಸಿರೀಸ್‌ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು.

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್: ಪಾಕ್​ ವಿರುದ್ಧ ಟಾಸ್​ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್​ ಆಯ್ಕೆ

ABOUT THE AUTHOR

...view details