ಕರ್ನಾಟಕ

karnataka

ETV Bharat / sports

ಬೆನ್ನ ಹಿಂದೆ ಬಂಡೆಯಂತಿರುವ ಕೋಚ್​ ದ್ರಾವಿಡ್​ಗಾಗಿ ಕಪ್​ ಗೆಲ್ಲುತ್ತೇವೆ: ರೋಹಿತ್​ ಶರ್ಮಾ - ವಿಶ್ವಕಪ್​ 2023

Rohit Sharma Press conference before world cup final: ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಕ್ರಿಕೆಟ್​ ಫೈನಲ್​ ಪಂದ್ಯಕ್ಕೂ ಮುನ್ನಾದಿನ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ರಾಹುಲ್​ ದ್ರಾವಿಡ್​ ಮತ್ತು ರೋಹಿತ್​ ಶರ್ಮಾ
ರಾಹುಲ್​ ದ್ರಾವಿಡ್​ ಮತ್ತು ರೋಹಿತ್​ ಶರ್ಮಾ

By PTI

Published : Nov 19, 2023, 8:17 AM IST

ಅಹಮದಾಬಾದ್(ಗುಜರಾತ್):2022ರಲ್ಲಿ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್​ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ಎದುರು ಭಾರತ ಸೋಲಿನ ಕಹಿ ಕಂಡಿತ್ತು. ಅಂಥ ಸಂದರ್ಭದಲ್ಲೂ ಕೋಚ್​ ರಾಹುಲ್ ದ್ರಾವಿಡ್ ಅವರು​ ನಮ್ಮ ಬೆನ್ನ ಹಿಂದೆ ಬಂಡೆಯಂತೆ ನಿಂತರು. ಅವರಿಗಾಗಿ ಈ ಬಾರಿಯ ವಿಶ್ವಕಪ್​ ಗೆಲ್ಲುತ್ತೇವೆ ಎಂದು ಭಾರತ ತಂಡ​ದ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

ಇಂದು ಅಹಮದಾಬಾದ್​ನ ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ವಿಶ್ವಕಪ್ ಫೈನಲ್​ ಪಂದ್ಯಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಪ್ರತಿಕ್ರಿಯಿಸಿರುವ ರೋಹಿತ್​ ಶರ್ಮಾ, ​ಭಾರತೀಯ ಕ್ರಿಕೆಟ್​ಗೆ ರಾಹುಲ್​ ದ್ರಾವಿಡ್ ಅವರು​ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಟಿ-20 ವಿಶ್ವಕಪ್​ ​​ಲೀಗ್​ ಪಂದ್ಯದಿಂದ ಸೆಮಿಫೈನಲ್‌ವರೆಗೂ ಉತ್ತಮ ರನ್​ ಗಳಿಸಿದ್ದರೂ, ನಾವು ಇಂಗ್ಲೆಂಡ್​ ವಿರುದ್ಧ ಸೋಲಬೇಕಾಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಆಟಗಾರರ ಪರ ದ್ರಾವಿಡ್ ನಿಂತಿದ್ದರು. ಹೀಗಾಗಿ ಅವರಿಗಾಗಿ ನಾವು ಚೆನ್ನಾಗಿ ಆಡುವ ಮೂಲಕ ಕಪ್​ ಗೆದ್ದು ಗೌರವ ನೀಡಬೇಕಿದೆ ಎಂದರು.

ದ್ರಾವಿಡ್​ ತಮ್ಮ ಆಲೋಚನೆ ಮತ್ತು ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ. ತಂಡದಲ್ಲಿ ಸ್ಪಷ್ಟತೆ ತರುವಲ್ಲಿ ದ್ರಾವಿಡ್​ ಪಾತ್ರ ದೊಡ್ಡದು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕೋಚ್​ ಒಪ್ಪದೇ ಇರಬಹುದು, ಅದು ಬೇರೆ ಮಾತು. ಈ ದಿನಗಳಲ್ಲಿ ನಾನು ಹೇಗೆ ಆಡುತ್ತಿದ್ದೇನೆ ಎಂಬುದನ್ನೂ ಸ್ಪಷ್ಟವಾಗಿ ರಾಹುಲ್ ಭಾಯ್ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಶಮಿ ಬಗ್ಗೆ ಪ್ರತಿಕ್ರಿಯೆ: ವಿಶ್ವಕಪ್​ನ ಮೊದಲ ಕೆಲವು ಪಂದ್ಯಗಳಿಂದ ವೇಗದ ಬೌಲರ್ ಮೊಹಮ್ಮದ್​ ಶಮಿ ಅವರನ್ನು ಕೈಬಿಡಲಾಗಿತ್ತು. ಈ ಕುರಿತ ಪ್ರಶ್ನೆಗಳಿಗೆ ರೋಹಿತ್​ ಶರ್ಮಾ ಉತ್ತರಿಸಿದರು. ಕೆಲವೊಮ್ಮೆ ತಂಡದ ಅಗತ್ಯತೆಗಳ ದೃಷ್ಟಿಯಿಂದ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶಮಿ ಒಬ್ಬ ಅದ್ಭುತ ಆಟಗಾರ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ಕಣಕ್ಕಿಳಿದರು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈಗಾಗಲೇ ವಿಶ್ವಕಪ್​ನಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿಶ್ವಕಪ್​ನಲ್ಲಿ ಬೌಲಿಂಗ್​ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿದೆ: ರೋಹಿತ್​ ಶರ್ಮಾ

ABOUT THE AUTHOR

...view details