ನವದೆಹಲಿ: ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿ ಪಂಜಾಬ್ ಕಿಂಗ್ಸ್ 34 ರನ್ಗಳ ಗೆಲುವು ಪಡೆಯಲು ನೆರವಾಗಿದ್ದ ಹರ್ಪ್ರೀತ್ ಬ್ರಾರ್ ತಾವೂ ಟರ್ಬನ್ ಧರಿಸುವುದರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ವಿರುದ್ಧ ಬ್ಯಾಟಿಂಗ್ನಲ್ಲಿ 25 ರನ್ಗಳಿಸಿದ್ದ ಬ್ರಾರ್ ನಂತರ ಬೌಲಿಂಗ್ನಲ್ಲಿ ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪಂಜಾಬ್ ಕಿಂಗ್ಸ್ ಗೆಲುವಿನ ಹೀರೋ ಆಗಿದ್ದ ಬ್ರಾರ್ಗೆ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ನೀವು 'ಸಿಂಗ್ ಇಸ್ ಬ್ಲಿಂಗ್' ಅಕ್ಷಯ್ ಕುಮಾರ್ ರೀತಿ ಕಾಣುತ್ತೀರಾ ಎಂದು ಸಂದೇಶ ಕಳುಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಾರ್, ದುಡ್ಡಿಗೋಸ್ಕರ ನಾನು ಅಕ್ಷಯ್ ಕುಮಾರ್ ಅವರಂತೆ ಟರ್ಬನ್ ಧರಿಸುವುದಿಲ್ಲ" ಎಂದು ಆ ಸಂದೇಶದ ಸ್ಕ್ರೀನ್ಶಾಟ್ ತೆಗೆದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ತಮ್ಮ ಟ್ವೀಟ್ನಲ್ಲಿ #isupportfarmers ಎಂಬ ಹ್ಯಾಶ್ಟ್ಯಾಗ್ ಅನ್ನು ಕೂಡ ಹಾಕಿಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೇಸರಿ, ಸಿಂಗ್ ಇಸ್ ಬ್ಲಿಂಗ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಿಖ್ ಪಾತ್ರದಾರಿಯಾಗಿ ನಟಿಸಿದ್ದಾರೆ. ಹಾಗಾಗಿ ಅಕ್ಷಯ್ ಹಣ ಸಂಪಾದಿಸಲು ಟರ್ಬನ್ ಧರಿಸುತ್ತಾರೆ, ತಾವೂ ಗೌರವ ಸೂಚಕವಾಗಿ ಧರಿಸುತ್ತೇವೆ ಅನ್ನುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.