ಅಡಿಲೇಡ್(ಆಸ್ಟ್ರೇಲಿಯಾ):ಭಾರತ - ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎರಡೂ ತಂಡಗಳ ಆಟಗಾರರು ಭರ್ಜರಿಯಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಬಟ್ಲರ್ ’’ಖಂಡಿತವಾಗಿಯು ಭಾರತ ಮತ್ತು ಪಾಕಿಸ್ತಾನ ಪೈನಲ್ ಪಂದ್ಯವನ್ನು ನೋಡಲು ಬಯಸುವುದಿಲ್ಲ.
ಭಾರತವು ಅತ್ಯಂತ ಬಲಿಷ್ಠ ತಂಡ ಅದನ್ನು ಕಡೆಗಣಿಸುವ ಹಾಗೆ ಇಲ್ಲ. ಬಲಾಡ್ಯ ತಂಡದೊಂದಿಗೆ ಯೋಜನೆಗಳನ್ನು ರೂಪಿಸಿ ಕಣಕ್ಕಿಳಿಯ ಬೇಕು ಎಂದು ಬಟ್ಲರ್ ಹೇಳಿದರು.
ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್ ಗಾಯಗೊಂಡಿದ್ದು, ಅವರಿನ್ನೂ ಚೇತರಿಸಿಕೊಂಡಿಲ್ಲ. 11ರ ಬಳಗದಲ್ಲಾಡುವುದು ಕಷ್ಟ, ಮಲಾನ್ ಬದಲು ಸೆಮಿಫೈನಲ್ ಪಂದ್ಯಕ್ಕೆ ಪಿಲ್ ಸಾಲ್ಟ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದರು.