ಕರ್ನಾಟಕ

karnataka

ETV Bharat / sports

ಪಿಚ್​ ಮೃದುವಾಗಿದ್ದು, ಬೇಗ ಸೀಮರ್​​ಗಳಿಗೆ ನೆರವಾಯಿತು:ರಿಷಭ್ ಪಂತ್ - ರಿಷಭ್ ಪಂತ್ ನ್ಯೂಸ್​

ಬುಧವಾರ ನಡೆದ ಮೂರನೇ ಟೆಸ್ಟ್‌ನ ಮೊದಲ ದಿನದಂದು ಭಾರತ ಕೇವಲ 78 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿತು. ಇಂಗ್ಲೆಂಡ್ ಬ್ಯಾಟಿಂಗ್ ಪರಿಗಣೆನೆಗೆ ತೆಗೆದುಕೊಂಡಿರುವ ಪಂತ್ ನಾವೂ ಕೂಡ ಉತ್ತಮವಾಗಿ ಆಡಬಹುದಿತ್ತು ಎಂದಿದ್ದಾರೆ.

Rishabh pant
ರಿಷಭ್ ಪಂತ್

By

Published : Aug 26, 2021, 3:14 PM IST

ಲೀಡ್ಸ್:ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 78ಕ್ಕೆ ಆಲೌಟ್​ ಆಗಿದೆ. ಈ ಬಗ್ಗೆ ಮಾತನಾಡಿರುವ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಮೃಧುವಾದ ಪಿಚ್​ನಲ್ಲಿ ನಮ್ಮ ಬ್ಯಾಟ್ಸ್​ಮನ್ ಉತ್ತಮವಾಗಿ ಆಡಬಹುದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಪಿಚ್​ ಅಂದುಕೊಂಡಿದ್ದಕ್ಕಿಂತ ಬೇಗ ಸೀಮರ್​ಗಳಿಗೆ ನೆರವಾಯಿತು ಎಂದು ಕಳಪೆ ಮೊತ್ತಕ್ಕೆ ಆಲೌಟ್​ ಆಗಿದ್ದಕ್ಕೆ ಕಾರಣ ತಿಳಿಸಿದ್ದಾರೆ.

ಬುಧವಾರ ನಡೆದ ಮೂರನೇ ಟೆಸ್ಟ್‌ನ ಮೊದಲ ದಿನದಂದು ಭಾರತ ಕೇವಲ 78 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿತು. ಇಂಗ್ಲೆಂಡ್ ಬ್ಯಾಟಿಂಗ್ ಪರಿಗಣೆನೆಗೆ ತೆಗೆದುಕೊಂಡಿರುವ ಪಂತ್ ನಾವೂ ಕೂಡ ಉತ್ತಮವಾಗಿ ಆಡಬಹುದಿತ್ತು ಎಂದಿದ್ದಾರೆ.

ಇದು ಆಟದ ಭಾಗವಾಗಿದೆ. ಬ್ಯಾಟಿಂಗ್ ಯೂನಿಟ್​ನ ಭಾಗವಾಗಿ ನೀಡುವ ಪ್ರತಿ ಪಂದ್ಯದಲ್ಲೂ ಶೇಕಡಾ 100ರಷ್ಟನ್ನು ನೀಡಲು ಪ್ರಯತ್ನಿಸಬೇಕು. ಆದರೆ, ಕೆಲವೊಂದು ಸಲ ಅದು ಅಂದುಕೊಂಡಂತೆ ಉತ್ತಮವಾಗಿ ಸಾಗುವುದಿಲ್ಲ.

ಬೆಳಗ್ಗೆ ವಿಕೆಟ್​ ತುಂಬಾ ಮೃದುವಾಗಿತ್ತು ಮತ್ತು ಅವರೂ ಕೂಡ ಉತ್ತಮ ಪ್ರದೇಶದಲ್ಲಿ ಬೌಲಿಂಗ್ ಮಾಡಿದರು. ನಾನು ಉತ್ತಮವಾಗಿ ಆ ಪರಿಸ್ಥಿತಿಗೆ ಅನ್ವಯಿಸುವಂತೆ ಆಡಬೇಕಿತ್ತು. ನಾವು ಇದರಿಂದ ನಮ್ಮ ತಪ್ಪನ್ನು ಅರಿತು, ಮುಂದೆ ಹೋಗಬೇಕೆಷ್ಟೇ. ಕ್ರಿಕೆಟರ್​ ಆಗಿ ನೀವು ಅದೊಂದು ವಿಷಯ ಮಾತ್ರ ಮಾಡಬಹುದು. ಇದೇ ತಪ್ಪು ಮುಂದಿನ ಇನ್ನಿಂಗ್ಸ್​ನಲ್ಲಿ ಆಗದಂತೆ ನೋಡಿಕೊಳ್ಳಬೇಕು ಎಂದು ಪಂತ್ ಬುಧವಾರ ನಡೆದ ವರ್ಚುಯಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ಬ್ಯಾಟಿಂಗ್ ಬಗ್ಗೆ ಮಾತನಾಡಿ, ಅವರು ಬ್ಯಾಟಿಂಗ್ ಮಾಡುವ ವೇಳೆ ವಿಕೆಟ್​ ಬ್ಯಾಟಿಂಗ್​ಗೆ ಅನುಕೂಲವಾಗಿ ವರ್ತಿಸಿತು. ಅವರೂ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ ನಾವು ಬ್ಯಾಟಿಂಗ್ ಮಾಡುವಾಗ ವಿಕೆಟ್​ ತುಂಬಾ ಮೃದುವಾಗಿತ್ತು. ಇಂಗ್ಲೆಂಡ್​ ವೇಗಿಗಳು ಒಳ್ಳೆಯ ಪ್ರದೇಶದಲ್ಲಿ ಬೌಲಿಂಗ್ ಮಾಡಿದರು ಎಂದು ಪಂತ್ ಹೇಳಿದ್ದಾರೆ.

ಭಾರತವನ್ನು 78ಕ್ಕೆ ಆಲೌಟ್ ಮಾಡಿರುವ ಇಂಗ್ಲೆಂಡ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 120 ರನ್​ಗಳಿಸಿದೆ. ಹಸೀಮ್ ಹಮೀದ್​ ಅಜೇಯ 60 ಮತ್ತು ರೋರಿ ಬರ್ನ್ಸ್​ ಅಜೇಯ 52 ರನ್​ಗಳಿಸಿದ್ದಾರೆ.

ABOUT THE AUTHOR

...view details