ಕರ್ನಾಟಕ

karnataka

ETV Bharat / sports

ಧೋನಿ ನಿವೃತ್ತಿ ನಂತರ ನಮಗೆ ಒಬ್ಬ ಫಿನಿಷರ್​ ಸಿಕ್ಕಿಲ್ಲ, ಇನ್ನೂ ಹುಡುಕುತ್ತಲೇ ಇದ್ದೇವೆ : ರೋಹಿತ್ ಶರ್ಮಾ - ODI World Cup

ಏಕದಿನ ಕ್ರಿಕೆಟ್​ಗೆ ಫಿನಿಷರ್​ ಪಾತ್ರ ಪ್ರಮುಖವಾಗಿರುತ್ತದೆ. ಆದರೆ, ಎಂಎಸ್​ ಧೋನಿ ನಿವೃತ್ತಿಯ ನಂತರ ನಾವು ಆ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸುವ ಆಟಗಾರನನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ವಿಶ್ವಕಪ್​ ವೇಳೆ ಒಬ್ಬ ಸಮರ್ಥ ಫಿನಿಷರ್​ನನ್ನು ಕಂಡುಕೊಳ್ಳುತ್ತೇವೆಂಬ ಭರವಸೆಯಿದೆ ಎಂದು ರೋಹಿತ್ ತಿಳಿಸಿದ್ದಾರೆ..

Rohit Sharma on MS Dhoni
ರೋಹಿತ್​ ಶರ್ಮಾ ಎಂಎಸ್ ಧೋನಿ

By

Published : Feb 5, 2022, 9:09 PM IST

ಅಹ್ಮದಾಬಾದ್​ :ಅಪ್ರತಿಮ ಎಂಎಸ್​ ಧೋನಿ ಅವರ ಅಂತಾರಾಷ್ಟ್ರೀಯ ನಿವೃತ್ತಿಯ ನಂತರ ಭಾರತ ತಂಡ ಒಬ್ಬ ಫಿನಿಷರ್​ನನ್ನು ಹುಡುಕಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ವರ್ಷ ನಡೆಯುವ ಏಕದಿನ ವಿಶ್ವಕಪ್​ ವೇಳೆಗೆ ನಾವು ಒಬ್ಬ ಫಿನಿಷರ್​ನನ್ನು ಕಂಡುಕೊಳ್ಳುತ್ತೇವೆ ಎಂಬ ಭರವಸೆಯಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಭಾನುವಾರದಿಂದ ಆರಂಭವಾಗಲಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಅಧಿಕೃತ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ನಾಳಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ರೋಹಿತ್​ಗೆ ತಂಡದಲ್ಲಿ ಹಾರ್ದಿಕ್​ ಪಾಂಡ್ಯ ಮತ್ತು ಜಡೇಜಾ ಅಲ್ಲದೆ ಮತ್ತಷ್ಟು ಗೇಮ್​ ಫಿನಿಷರ್​ಗಳ ಅಗತ್ಯವಿದೆ ಎಂದಿದ್ದಾರೆ.

ಏಕದಿನ ಕ್ರಿಕೆಟ್​ಗೆ ಫಿನಿಷರ್​ ಪಾತ್ರ ಪ್ರಮುಖವಾಗಿರುತ್ತದೆ. ಆದರೆ, ಎಂಎಸ್​ ಧೋನಿ ನಿವೃತ್ತಿಯ ನಂತರ ನಾವು ಆ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸುವ ಆಟಗಾರನನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ವಿಶ್ವಕಪ್​ ವೇಳೆ ಒಬ್ಬ ಸಮರ್ಥ ಫಿನಿಷರ್​ನನ್ನು ಕಂಡುಕೊಳ್ಳುತ್ತೇವೆಂಬ ಭರವಸೆಯಿದೆ ಎಂದು ರೋಹಿತ್ ತಿಳಿಸಿದ್ದಾರೆ.

"ನಾವು ಹಾರ್ದಿಕ್​ ಪಾಂಡ್ಯರನ್ನು ಪ್ರಯತ್ನಿಸಿದ್ದೇವೆ. ಜಡೇಜಾ ಕೂಡ ಉತ್ತಮವಾಗಿ ಆಡಿದ್ದಾರೆ. ಆದರೆ, ಆ ಜಾಗಕ್ಕೆ ನಾವು ಹೆಚ್ಚಿನ ಆಯ್ಕೆಗಳನ್ನು ಸೃಷ್ಟಿಸಬೇಕಿದೆ. ಈ ಸರಣಿಯಲ್ಲಿ ಅವಕಾಶ ಪಡೆದಿರುವ ಹುಡುಗರು, ತಮಗೆ ಸಿಕ್ಕಿರುವ ಆ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ತಂಡದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಲಿದ್ದಾರೆ ಎಂಬ ಭರವಸೆಯಿದೆ" ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.

ಇದನ್ನೂ ಓದಿ:ನಿವೃತ್ತಿ ಘೋಷಿಸಿ ಹತಾಶನಾಗಿದ್ದ ನನಗೆ ಮತ್ತೆ ಕ್ರಿಕೆಟ್​ಗೆ ಮರಳಲು ಸಿಎಸ್​ಕೆ-ಧೋನಿ ಕಾರಣ : ಅಂಬಾಟಿ ರಾಯುಡು

ABOUT THE AUTHOR

...view details