ಲಂಡನ್: ನನ್ನ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರೊಂದಿಗಿನ ಸಂಬಂಧ ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ಆಧಾರಿತವಾಗಿದೆ. ಹಾಗಾಗಿ ಇದು ತಂಡದಲ್ಲಿನ ಪ್ರತಿಯೊಬ್ಬರು ಎದುರಾಳಿಯನ್ನು ಸೋಲಿಸಲು ಬಯಸುವ ಬಳಗವನ್ನು ಕಟ್ಟಲು ನೆರವಾಗಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬುಧವಾರ, ಕೊಹ್ಲಿ ತನ್ನ ಸಹ ಆಟಗಾರರೊಂದಿಗೆ ಇಲ್ಲಿನ ತಾಜ್ ಹೋಟೆಲ್‌ನಲ್ಲಿ ಹೊಸ ವಿಶೇಷ ಸದಸ್ಯರ 'ದಿ ಚೇಂಬರ್ಸ್' ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು "ನಮ್ಮ(ರವಿಶಾಸ್ತ್ರಿ) ನಡುವಿನ ಬಾಂಧವ್ಯ ಮೈದಾನದ ಹೊರತಾಗಿಯೂ ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ ಮತ್ತು ಇದು ಭಾರತೀಯ ಕ್ರಿಕೆಟ್ ಅನ್ನು ನಾವು ಕಂಡುಕೊಂಡಿರುವುದಕ್ಕಿಂತ ಉತ್ತಮ ಸ್ಥಾನದಲ್ಲಿ ಕೊಂಡೊಯ್ಯುವುದರ ಕಡೆಗೆ ನಮ್ಮೆಲ್ಲರ ಗುರಿ ಮತ್ತು ಉದ್ದೇಶ ಇದೆ "ಎಂದು ಕೊಹ್ಲಿ ಹೇಳಿದರು.
ಈ ಉದ್ದೇಶ ನಮ್ಮಲ್ಲಿ ಇರುವುದರಿಂದಲೇ , ನಾವು ವಿಶ್ವದಲ್ಲಿ ಎಲ್ಲೇ ಆಡಿದರೂ ಎದುರಾಳಿಯನ್ನು ಸೋಲಿಸಲು ಪ್ರತಿಯೊಬ್ಬರು ಬಯಸುವ ತಂಡವಾಗಿ ನಿಲ್ಲುತ್ತೇವೆ ಮತ್ತು ಇದು ನಮಗೆ ಹೆಮ್ಮೆಯ ವಿಷಯ ಎಂದು ಟೀಮ್ ಇಂಡಿಯಾ ನಾಯಕ ಕೊಹ್ಲಿ ಹೇಳಿದ್ದಾರೆ.