ಕರ್ನಾಟಕ

karnataka

ETV Bharat / sports

ಆಫ್ರಿಕಾ ಪ್ರವಾಸದ ಬಗ್ಗೆ ಸ್ಪಷ್ಟತೆಯಿಲ್ಲ, ಬಿಸಿಸಿಐ ಜೊತೆ ರಾಹುಲ್ ಭಾಯ್ ಮಾತುಕತೆ ಆರಂಭಿಸಿದ್ದಾರೆ: ಕೊಹ್ಲಿ - ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್​

ನಾವು ಈ ಕುರಿತು ಮಂಡಳಿಯೊಂದಿಗೆ ಮಾತನಾಡುತ್ತಿದ್ದೇವೆ. ಒಂದು ಅಥವಾ ಒಂದೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವಿಷಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

virat Kohli on SA tour
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸ

By

Published : Dec 2, 2021, 5:20 PM IST

ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮುಂದಿನ ಒಂದರೆಡು ದಿನಗಳಲ್ಲಿ ಬಿಸಿಸಿಐನಿಂದ ಸಂಪೂರ್ಣ ಸ್ಪಷ್ಟತೆ ಸಿಗಲಿದೆ. ಆಫ್ರಿಕಾದಲ್ಲಿ ಹೊಸ COVID-19 ರೂಪಾಂತರದ ಕಂಡು ಬಂದಿರುವುದರಿಂದ ಯಾವುದೇ ರೀತಿಯ ಗೊಂದಲ ಉಂಟಾಗುವುದನ್ನ ಬಯಸುವುದಿಲ್ಲ ಎಂದು ಹೇಳಿದ್ದಾರೆ.

ನೀವು ಸಾಧ್ಯವಾದಷ್ಟು ಈ ವಿಚಾರದಲ್ಲಿ ಸಂಪೂರ್ಣ ಸ್ಪಷ್ಟತೆ ಬಯಸುತ್ತೀರಿ. ಆದ್ದರಿಂದ ತಂಡದ ಎಲ್ಲ ಹಿರಿಯ ಆಟಗಾರರೊಂದಿಗೆ ಮಾತನಾಡಿದ್ದೇವೆ. ನಿಸ್ಸಂಶಯವಾಗಿ ರಾಹುಲ್ ಭಾಯ್ (ದ್ರಾವಿಡ್) ತಂಡದಲ್ಲಿ ಮೊದಲಿಗೆ ಸಂಭಾಷಣೆಯನ್ನು ಪ್ರಾರಂಭಿಸಿದ್ದಾರೆ" 2ನೇ ಟೆಸ್ಟ್​ಗೂ ಮುನ್ನ ನಡೆದ ಸುದ್ದಿಗೋಷ್ಠಿಯ ವೇಳೆ ಹೇಳಿದ್ದಾರೆ.

ದಿನದ ಆ ವಿಷಯವನ್ನು ಹೊರೆತುಪಡಿಸಿಯೂ ನಮ್ಮ ಗಮನ 2ನೇ ಟೆಸ್ಟ್​ನಿಂದ ಹೊರ ಹೋಗುವುದಿಲ್ಲ. ಆದರೂ ನೀವು ಹೋಗಬೇಕಾದ ಸ್ಥಳದ ಪರಿಸ್ಥಿತಿಯ ಬಗ್ಗೆ ಮತ್ತು ಅಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಬೇಕಾಗುತ್ತದೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.

ನಾವು ಈ ಕುರಿತು ಮಂಡಳಿಯೊಂದಿಗೆ ಮಾತನಾಡುತ್ತಿದ್ದೇವೆ. ಒಂದು ಅಥವಾ ಒಂದೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವಿಷಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ವೇಳಾಪಟ್ಟಿಯಂತೆ ಡಿಸೆಂಬರ್ 8ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಟೀಮ್ ಇಂಡಿಯಾ ಮೊದಲಿಗೆ ಮೂರು ಟೆಸ್ಟ್​ ಪಂದ್ಯಗಳು ನಂತರ 3 ಏಕದಿನ ಹಾಗೂ 4 ಟಿ-20 ಪಂದ್ಯಗಳನ್ನಾಡಲಿದೆ.

ಇದನ್ನೂ ಓದಿ:ಒಂದೆರಡು ದಿನಗಳಲ್ಲಿ ಕೊಹ್ಲಿಯ ODI ನಾಯಕತ್ವದ ಭವಿಷ್ಯ ನಿರ್ಧಾರ

ABOUT THE AUTHOR

...view details