ಕರ್ನಾಟಕ

karnataka

ETV Bharat / sports

ಖಂಡಿತ ಭಾರತ ಕಮ್​ಬ್ಯಾಕ್ ಮಾಡಲಿದೆ, ನಾವು ಅವರನ್ನೆದುರಿಸಲು ಸಿದ್ಧಗೊಳ್ಳುತ್ತಿದ್ದೇವೆ: ಕಾಲಿಂಗ್​ವುಡ್​ - ವಿರಾಟ್ ಕೊಹ್ಲಿ

ಭಾರತ ತಂಡ ಲೀಡ್ಸ್​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್​ ಮತ್ತು 151 ರನ್​ಗಳಿಂದ ಸೋಲು ಕಂಡಿತು. 5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ಓವಲ್​ನಲ್ಲಿ ಸೆಪ್ಟೆಂಬರ್​ 2ರಿಂದ 4ನೇ ಟೆಸ್ಟ್​ ಆರಂಭವಾಗಲಿದ್ದು, ಎರಡೂ ತಂಡಗಳು ಮುನ್ನಡೆ ಸಾಧಿಸಲು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿವೆ.

Collingwood
ಪಾಲ್​ ಕಾಲಿಂಗ್​ವುಡ್​

By

Published : Aug 31, 2021, 7:45 PM IST

ಲಂಡನ್: ಭಾರತದ ಬ್ಯಾಟ್ಸ್​ಮನ್​ಗಳು 3ನೇ ಟೆಸ್ಟ್​ನಲ್ಲಿ ಹೀನಾಯ ಸೋಲು ಕಂಡ ಬಳಿಕ ಬಹಳಷ್ಟು ಟೀಕೆಗಳನ್ನು ಎದುರಿಸಿದೆ. ಹಾಗಾಗಿ 4ನೇ ಟೆಸ್ಟ್​ನಲ್ಲಿ ಖಂಡಿತ ಅವರು ಬಲಿಷ್ಠರಾಗಿ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಿದ್ದು, ನಾವು ನಾಲ್ಕನೇ ಪಂದ್ಯದಲ್ಲಿ ಅವರನ್ನು ಎದುರಿಸಲು ಸನ್ನದ್ಧರಾಗುತ್ತಿದ್ದೇವೆ ಎಂದು ಗುರುವಾರ ಇಂಗ್ಲೆಂಡ್ ಸಹಾಯಕ ಕೋಚ್​ ಪಾಲ್ ಕಾಲಿಂಗ್​ವುಡ್​ ತಿಳಿಸಿದ್ದಾರೆ.

ಭಾರತ ತಂಡ ಲೀಡ್ಸ್​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್​ ಮತ್ತು 151 ರನ್​ಗಳಿಂದ ಸೋಲು ಕಂಡಿತು. 5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ಓವಲ್​ನಲ್ಲಿ ಸೆಪ್ಟೆಂಬರ್​ 2ರಿಂದ 4ನೇ ಟೆಸ್ಟ್​ ಆರಂಭವಾಗಲಿದ್ದು, ಎರಡು ತಂಡಗಳೂ ಮುನ್ನಡೆ ಸಾಧಿಸಲು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿವೆ.

ನಾವು ಅದ್ಭುತವಾಗಿ ಬೌಲಿಂಗ್ ಮಾಡಿದೆವು ಎಂದು ನಾನು ಭಾವಿಸುತ್ತೇನೆ. ನೀವು ಭಾರತ ತಂಡದ ಬೆಂಬಲಿಗರಾದರೇ ಅವರನ್ನು ಟೀಕೆ ಮಾಡುವುದು ತುಂಬಾ ಸುಲಭ. ಆದರೆ, 3ನೇ ಟೆಸ್ಟ್​ನ ಮೊದಲ ದಿನ ಪಿಚ್​ ತುಂಬಾ ಚಂಚಲವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಬ್ಯಾಟ್ಸ್​ಮನ್​ಗಳಿಗೆ ಆಡುವುದು ತುಂಬಾ ಕಠಿಣವಾಗಿರುತ್ತದೆ. ನಮ್ಮ ಬೌಲರ್​ಗಳು ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದೆವು. ವಿರಾಟ್​ ಕೂಡ ನಮ್ಮ ಬೌಲರ್​ಗಳ ನಿಖರತೆ ಮತ್ತು ಪಟ್ಟುಹಿಡಿದು ಹೋರಾಡಿದರೆಂದು ತಿಳಿಸಿದ್ದರು. ನಮ್ಮ ಬೌಲರ್​ಗಳ ನಿಖರತೆ ನಿಜಕ್ಕೂ ಅದ್ಭುತವಾಗಿತ್ತು ಎಂದು ಕಾಲಿಂಗ್​ವುಡ್​ ಹೇಳಿದ್ದಾರೆ.

ಲಾರ್ಡ್ಸ್​ನಲ್ಲಿ 151 ರನ್​ಗಳಿಂದ ಇಂಗ್ಲೆಂಡ್​ ಸೋತ ಬಳಿಕ ಮುಂದಿನ ಪಂದ್ಯದಲ್ಲಿ ಅದ್ಭುತವಾಗಿ ಹಿಂತಿರುಗಿತ್ತು. ಇದೀಗ ಭಾರತ ಕೂಡ ಅದೇ ರೀತಿ ಬೌನ್ಸ್​ಬ್ಯಾಕ್ ಮಾಡಬಹುದೇ ಎಂದು ಕೇಳಿದ್ದಕ್ಕೆ, ನಾವು ಅದಕ್ಕೆಲ್ಲಾ ಸಿದ್ಧರಾಗಿದ್ದೇವೆ ಎಂದು ಇಂಗ್ಲೆಂಡ್ ಮಾಜಿ ನಾಯಕ ತಿಳಿಸಿದ್ದಾರೆ.

ಅವರು(ಭಾರತ) ಬೌನ್ಸ್​ ಬ್ಯಾಕ್​ ಮಾದಬಹುದಲ್ವಾ?. ನಾವು ಖಂಡಿತವಾಗಿಯೂ ಭಾರತೀಯ ಬೌನ್ಸ್ ಬ್ಯಾಕ್‌ಗೆ ಉತ್ತರಿಸಲು ನಮ್ಮನ್ನು ನಾವು ಸಿದ್ಧಪಡಿಸುತ್ತಿದ್ದೇವೆ ಎಂಬುದರಲ್ಲಿ ನನಗೆ ಖಾತ್ರಿಯಿದೆ. ಭಾರತ ಅತ್ಯುತ್ತಮ ಗುಣಮಟ್ಟವುಳ್ಳ ತಂಡ ಎಂಬುದು ನಮಗೆ ತಿಳಿದಿದೆ. ಹಾಗಾಗಿ ಓವಲ್​ನಲ್ಲಿ ನಾವು ಶೇಕಡಾ 100 ಪ್ರತಿಶತದೊಂದಿದೆ ಹೋರಾಡಲು ಸಿದ್ಧಗೊಳ್ಳುತ್ತಿದ್ದೇವೆ ಎಂದು ಇಂಗ್ಲೆಂಡ್​ ತಂಡದ ಪರ 68 ಟೆಸ್ಟ್​ ಮತ್ತು 197 ಏಕದಿನ ಪಂದ್ಯಗಳನ್ನಾಡಿರುವ ಪಾಲ್ ಕಾಲಿಂಗ್​ವುಡ್​ ಹೇಳಿದ್ದಾರೆ.

ಇದನ್ನು ಓದಿ:2 ಹೊಸ IPL ತಂಡಗಳಿಗೆ ಬಿಡ್ಡಿಂಗ್​: 2000 ಕೋಟಿ ರೂ. ಮೂಲಬೆಲೆ ನಿಗದಿ, 5000 ಕೋಟಿ ಆದಾಯ ನಿರೀಕ್ಷೆಯಲ್ಲಿ BCCI

ABOUT THE AUTHOR

...view details