ಪರ್ತ್: ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಪರ್ತ್ ಸ್ಕಾರ್ಚರ್ಸ್ ಮಹಿಳಾ ತಂಡ 12 ರನ್ಗಳಿಂದ ಗೆದ್ದು2021ರ ವುಮೆನ್ಸ್ ಬಿಗ್ ಬ್ಯಾಶ್ ಲೀಗ್(WBBL) ಮುಡಿಗೇರಿಸಿಕೊಂಡಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸ್ಕಾರ್ಚರ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 146 ರನ್ಗಳಿಸಿತ್ತು. ನಾಯಕಿ ಸೂಫೀ ಡಿವೈನ್ 35, ಬೆತ್ ಮೂನಿ 19, ಮರಿಝಾನ್ ಕಾಪ್ 31 ಮತ್ತು ಹೀದರ್ ಗ್ರಹಂ 23 ರನ್ಗಳಿಸಿದ್ದರು.
147 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಅಡಿಲೇಡ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತವಾಯಿತು. ಲೌರಾ ವಾಲ್ವಾರ್ಟ್ 25, ನಾಯಕಿ ತಹಿಲಾ ಮೆಕ್ಗ್ರಾತ್ 36, ಮೆಡಿಲಿನ್ ಪೆನ್ನಾ ಅಜೇಯ 30 ರನ್ಗಳಿಸಿ ಗೆಲುವಿಗಾಗಿ ಮಾಡಿದ ಪ್ರತಿರೋಧ ವ್ಯರ್ಥವಾಯಿತು.