ಮೊಹಾಲಿ(ಪಂಜಾಬ್): ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿರುವ ಟೀಂ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ, ಇದೀಗ ಮತ್ತೊಮ್ಮೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪಂಜಾಬ್ನ ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಿದ್ದು, ಇದೀಗ ಶ್ರೀಲಂಕಾ ವಿರುದ್ಧ ಮಾರ್ಚ್ 12ರಿಂದ ಆರಂಭಗೊಳ್ಳಲಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಬೆಂಗಳೂರಿಗೆ ತೆರಳಲು ಸಿದ್ಧರಾಗ್ತಿದ್ದರು. ಈ ವೇಳೆ ವಿಶೇಷ ಚೇತನ ವ್ಯಕ್ತಿಗೆ ವಿರಾಟ್ ಕೊಹ್ಲಿ ತಮ್ಮ ಜರ್ಸಿ ನೀಡಿದ್ದಾರೆ.
ಧರ್ಮವೀರ್ ಪಾಲ್ಗೆ ಜರ್ಸಿ ನೀಡಿದ ವಿರಾಟ್:ಟೀಂ ಇಂಡಿಯಾದ ಅನಧಿಕೃತ 12ನೇ ಆಟಗಾರ ಎಂಬ ಖ್ಯಾತಿಗೆ ಧರಂವೀರ್ ಪಾಲ್ ಪಾತ್ರರಾಗಿದ್ದಾರೆ. ಮಧ್ಯಪ್ರದೇಶದ ಧರ್ಮವೀರ್ ಪಾಲ್ ಹುಟ್ಟುವಾಗಲೇ ಪೋಲಿಯೊಗೆ ತುತ್ತಾಗಿದ್ದಾರೆ. ಟೀಂ ಇಂಡಿಯಾದ ಪ್ರತಿವೊಂದು ಮ್ಯಾಚ್ ನೋಡಲು ತೆರಳುವ ಇವರು, ತಂಡದ ಬಹುತೇಕ ಎಲ್ಲ ಪ್ಲೇಯರ್ಸ್ಗೂ ಚಿರಪರಿಚಿತರು.
ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಬಸ್ ಹತ್ತಲು ಟೀಂ ಇಂಡಿಯಾ ಬಸ್ ಹತ್ತಲು ಸಿದ್ಧತೆ ನಡೆಸಿತು. ಈ ವೇಳೆ, ಬಸ್ನಿಂದ ಕೆಳಗಿಳಿದು ಬಂದಿರುವ ವಿರಾಟ್ ಕೊಹ್ಲಿ ತಮ್ಮ ಬಳಿ ಇದ್ದ ಜರ್ಸಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದರ ವಿಡಿಯೋ ತುಣುಕವೊಂದನ್ನ ಧರಂವೀರ್ ಸಿಂಗ್ ಹಂಚಿಕೊಂಡಿದ್ದಾರೆ.
ಉಡುಗೊರೆ ನೀಡಿದ್ದಕ್ಕಾಗಿ ಧನ್ಯವಾದಗಳು ಚಾಂಪಿಯನ್. ನೀವೂ ಯಾವಾಗಲೂ ನನಗೆ ಚಾಂಪಿಯನ್ ಆಗಿರುತ್ತೀರಿ. ನಿಮ್ಮ ಆಟ ಮುಂದಿನ ಹಲವು ವರ್ಷಗಳ ಕಾಲ ಮುಂದುವರೆಯಲಿದೆ ಎಂದು ದೇವರಲ್ಲಿ ಆಶೀರ್ವದಿಸುತ್ತೇನೆ ಎಂದಿದ್ದಾರೆ.