ಕರ್ನಾಟಕ

karnataka

ETV Bharat / sports

ಡಿಆರ್​ಎಸ್​ ತೆಗೆದುಕೊಳ್ಳಲು ರೋಹಿತ್ ಮನವೊಲಿಸಿ ಗೆದ್ದ ಕೊಹ್ಲಿ: ವಿಡಿಯೋ ವೈರಲ್​ - ರೋಹಿತ್ ಶರ್ಮಾ ಮತ್ತು ಕೊಹ್ಲಿ

ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟಿಗೆ ತಾಗಿರುವುದು ಖಚಿತವಾಗಿತ್ತು. ಈ ಸಂದರ್ಭದಲ್ಲಿ ನಡೆದ ಸಂಭಾಷಣೆ ಸ್ಟಂಪ್​ ಮೈಕ್​​ನಲ್ಲಿ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ..

Virat Kohli Convinces Rohit Sharma To Take DRS
ಭಾರತ vs ವೆಸ್ಟ್​ ಇಂಡೀಸ್​ ಏಕದಿನ ಸರಣಿ

By

Published : Feb 6, 2022, 10:06 PM IST

ಅಹ್ಮದಾಬಾದ್: ವೆಸ್ಟ್ ​ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಹಾಲಿ ನಾಯಕ ರೋಹಿತ್ ಶರ್ಮಾ ಅವರನ್ನು ಡಿಆರ್​ಎಸ್​ ತೆಗೆದುಕೊಳ್ಳುವಂತೆ ಕೊಹ್ಲಿ ಮನವೊಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

22ನೇ ಓವರ್ ಯಜ್ವೇಂದ್ರ ಚಹಲ್​ ಬೌಲಿಂಗ್​ನಲ್ಲಿ ವಿಂಡೀಸ್ ಬ್ಯಾಟರ್​ ಶಮರ್​ ಬ್ರೂಕ್ಸ್​ ಬ್ಯಾಟ್​ಗೆ ಚೆಂಡು ಸ್ವಲ್ಪ ತಗುಲಿ ಕೀಪರ್​ ರಿಷಭ್​ ಪಂತ್‌ ಕೈಗೆ ಸೇರಿತ್ತು. ಆದರೆ, ನಾಯಕ ರೋಹಿತ್ ಸೇರಿದಂತೆ ಇಡೀ ತಂಡ ಎಲ್​ಬಿಡಬ್ಲ್ಯೂಗೆ ಮನವಿ ಮಾಡಿತು.

ಆದರೆ, ಆನ್​ಫೀಲ್ಡ್​ ಅಂಪೈರ್​ ನಾಟೌಟ್ ಎಂದರು. ಈ ಸಂದರ್ಭದಲ್ಲಿ ರೋಹಿತ್ ವಿಕೆಟ್ ಕೀಪರ್​ ಪಂತ್​ರನ್ನು ಚೆಂಡು ಎಡ್ಜ್​ ಆಗಿರಬಹುದಾ? ಎಂದು ಕೇಳಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೊಹ್ಲಿ ಚೆಂಡು ಬ್ಯಾಟ್​ಗೆ ತಾಗಿದೆ ಎಂದು ರೋಹಿತ್​ರನ್ನು ಮನವೊಲಿಸಿ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಮಾಡಿದರು.

ಟಿವಿ ರಿಪ್ಲೇನಲ್ಲಿ ಚೆಂಡು ಬ್ಯಾಟಿಗೆ ತಾಗಿರುವುದು ಖಚಿತವಾಗಿತ್ತು. ಈ ಸಂದರ್ಭದಲ್ಲಿ ನಡೆದ ಸಂಭಾಷಣೆ ಸ್ಟಂಪ್​ ಮೈಕ್​​ನಲ್ಲಿ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ ಪಂದ್ಯದಲ್ಲಿ ಚಹಲ್​ ಮತ್ತು ವಾಷಿಂಗ್ಟನ್​​ ಸುಂದರ್​ ದಾಳಿಗೆ ಸಿಲುಕಿದ ವಿಂಡೀಸ್​, ಕೇವಲ 176ರನ್​ಗಳಿಗೆ ಆಲೌಟ್ ಆಗಿತ್ತು. 177 ರನ್​ಗಳ ಸಾಧಾರಣ ಗುರಿಯನ್ನು ಭಾರತ ತಂಡ ರೋಹಿತ್ ಅವರ ಅರ್ಧಶತಕದ ನೆರವಿನಿಂದ 28 ಓವರ್​ಗಳಲ್ಲಿ ಗೆದ್ದು, ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ:ವಿಂಡೀಸ್​ ವಿರುದ್ಧ ಭಾರತಕ್ಕೆ 6 ವಿಕೆಟ್​ಗಳ​ ಜಯ : ಗೆಲುವಿನೊಂದಿಗೆ ರೋಹಿತ್ ಯುಗ ಆರಂಭ

ABOUT THE AUTHOR

...view details