ಕರ್ನಾಟಕ

karnataka

ETV Bharat / sports

ಎದ್ದು ನಿಂತು ಚಪ್ಪಾಳೆ: ಕನ್ನಡಿಗನ ಶತಕದಾಟಕ್ಕೆ ಸಹ ಆಟಗಾರರು ಅಭಿನಂದಿಸಿದ್ದು ಹೀಗೆ! - ಕನ್ನಡಿಗ ರಾಹುಲ್​ ಶತಕ

ಲಾರ್ಡ್ಸ್​​ ಮೈದಾನದಲ್ಲಿ ಶತಕ ಸಿಡಿಸಿ ಮಿಂಚಿರುವ ರಾಹುಲ್​ಗೆ ಸಹ ಆಟಗಾರರು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದು, ಅದರ ವಿಡಿಯೋ ತುಣುಕವೊಂದನ್ನ ಬಿಸಿಸಿಐ ಟ್ವಿಟರ್​ನಲ್ಲಿ ಹಾಕಿಕೊಂಡಿದೆ.

KL Rahul
KL Rahul

By

Published : Aug 13, 2021, 4:44 PM IST

ಲಾರ್ಡ್ಸ್​​:ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಶತಕ ಸಿಡಿಸಿ, ತಂಡಕ್ಕೆ ಬದ್ರಬುನಾದಿ ಹಾಕುವಲ್ಲಿ ಯಶಸ್ವಿಯಾದರು. ಇವರ ಆಟಕ್ಕೆ ಇತರ ಆಟಗಾರರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡ್ರೆಸ್ಸಿಂಗ್​ ರೂಂಗೆ ಬರುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್ ರಾಹುಲ್​, ಸ್ಫೋಟಕ ಆಟಗಾರ ರೋಹಿತ್​ ಶರ್ಮಾ ಜೊತೆ ಸೇರಿ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಆದರೆ, 83ರನ್​ಗಳಿಕೆ ಮಾಡಿದ್ದ ವೇಳೆ ರೋಹಿತ್​ ವಿಕೆಟ್ ಒಪ್ಪಿಸಿದರೆ, ರಾಹುಲ್ ಮಾತ್ರ ಶತಕ ಸಿಡಿಸಿ, ಲಾರ್ಡ್ಸ್​​ ಮೈದಾನದಲ್ಲಿ ಮಹತ್ವದ ಸಾಧನೆ ಮಾಡಿದರು. ಇವರ ಸಾಧನೆಗೆ ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು. ಇದರ ವಿಡಿಯೋ ತುಣಕೊಂದನ್ನ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದೆ.

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ಶತಕ ಸಿಡಿಸಿರುವ 4ನೇ ಆಟಗಾರ ರಾಹುಲ್​ ಆಗಿದ್ದು, ಈಗಾಗಲೇ ವಿನೂ ಮಂಕಡ್, ರವಿಶಾಸ್ತ್ರಿ, ಸೌರವ್​ ಗಂಗೂಲಿ ಈ ಮೈದಾನದಲ್ಲಿ ಆರಂಭಿಕರಾಗಿ ಶತಕ ಸಿಡಿಸಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ 127ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದಿದ್ದ ಕೆ.ಎಲ್ ರಾಹುಲ್​​ ಇಂದು ಕೇವಲ 2ರನ್​ಗಳಿಕೆ ಮಾಡಿ 129ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಹಾನೆ ಕೂಡ 1 ರನ್​ ಗಳಿಸಿ ಪೆವಿಲಿಯನ್​ ಸೇರಿಕೊಂಡರು.

ಇದನ್ನೂ ಓದಿರಿ: ಲಾರ್ಡ್ಸ್​​ನಲ್ಲಿ ದಾಖಲೆಗಳ ಸುರಿಮಳೆಗೈದ ಕನ್ನಡಿಗ...129ರನ್​ಗಳಿಸಿ ವಿಕೆಟ್​ ಒಪ್ಪಿಸಿದ ರಾಹುಲ್​!
ವಿಶ್ ಮಾಡಿದ ಆತಿಯಾ:ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿ ಮಿಂಚಿರುವ ರಾಹುಲ್​ಗೆ ಸುನೀಲ್ ಶೆಟ್ಟಿ ಮಗಳು ಆತಿಯಾ ವಿಶ್​ ಮಾಡಿದ್ದಾರೆ. ರಾಹುಲ್​ ಸಂಭ್ರಮ ಮಾಡುತ್ತಿರುವ ಫೋಟೋ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅದಕ್ಕೆ ಲವ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುನೀಲ್​ ಶೆಟ್ಟಿ ಕೂಡ ಶತಕವೀರ ರಾಹುಲ್​​ಗೆ ವಿಶ್ ಮಾಡಿದ್ದಾರೆ.

ABOUT THE AUTHOR

...view details