ಕರ್ನಾಟಕ

karnataka

ETV Bharat / sports

ಶಿಖಾ ಪಾಂಡೆ ಸ್ವಿಂಗ್​ಗೆ ಅಲಿಸಾ ಹೀಲಿ ಕ್ಲೀನ್​ ಬೌಲ್ಡ್​.. ಇದು ಶತಮಾನದ ಎಸೆತ ಎಂದ ನೆಟ್ಟಿಗರು!

ದುರಾದೃಷ್ಟವಶಾತ್​ ಭಾರತ ಬೌಲರ್​ಗಳ ಸಾಹಸದ ಹೊರೆತಾಗಿಯೂ ಈ ಪಂದ್ಯದಲ್ಲಿ ಸೋಲು ಕಂಡಿತು. ಕೌರ್ ಬಳಗ ನೀಡಿದ್ದ 119 ರನ್​ಗಳ ಗುರಿಯನ್ನು ಆಸ್ಟ್ರೇಲಿಯಾ ಮಹಿಳಾ ತಂಡ 19.1 ಓವರ್​ಗಳಲ್ಲಿ ತಲುಪಿತು. ತಹಿಲಾ ಮೆಕ್​ಗ್ರಾತ್​ ಅಜೇಯ 42 ರನ್​ಗಳಿಸಿ ಗೆಲುವಿನ ರೂವಾರಿಯಾದರು..

Shikha Pandey's 'ball of the century
ಶಿಖಾ ಪಾಂಡೆ ಇನ್​ಸ್ವಿಂಗ್

By

Published : Oct 10, 2021, 3:17 PM IST

ಕ್ವೀನ್ಸ್​ಲ್ಯಾಂಡ್​ :ಭಾರತ ಮಹಿಳಾ ತಂಡದ ವೇಗದ ಬೌಲರ್​ ಶಿಖಾ ಪಾಂಡೆ ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಲಿಸಾ ಹೀಲಿ ಅವರನ್ನು ತನ್ನ ಅದ್ಭುತ ಇನ್​ಸ್ವಿಂಗ್ ಮೂಲಕ ಕ್ಲೀನ್ ಬೌಲ್ಡ್​ ಮಾಡಿದ್ದರು. ಈ ಎಸೆತ ಇದೀಗ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ. ಇದು ಶತಮಾನದ ಎಸೆತ ಎಂದು ಶಿಖಾಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

ಶನಿವಾರ ನಡೆದ 2ನೇ ಟಿ20 ಪಂದ್ಯದ ವೇಳೆ ಶಿಖಾ ಪಾಂಡೆ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಹೀಲಿ ಬೌಂಡರಿ ಬಾರಿಸಿದರು. ಆದರೆ, ಅದ್ಭುತವಾಗಿ ಕಮ್​ಬ್ಯಾಕ್ ಮಾಡಿದ ಶಿಖಾ 2ನೇ ಎಸೆತದಲ್ಲಿ ನಂಬಲಾಸಾಧ್ಯವಾದ ರೀತಿ ಇನ್​ಸ್ವಿಂಗ್ ಮಾಡಿದರು. ಚೆಂಡು ಹೀಲಿಯವರನ್ನ ತಪ್ಪಿಸಿ ಬೆಲ್ಸ್ ಹಾರಿಸಿತು.

ಶಿಖಾ ಪಾಂಡೆಯ ಈ ಎಸೆತವನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್​ ವಾಸೀಮ್ ಜಾಫರ್ ಮಹಿಳಾ ಕ್ರಿಕೆಟ್​ನಲ್ಲಿನ​ 'ಶತಮಾನದ ಎಸೆತ' ಎಂದು ಕರೆದಿದ್ದಾರೆ. ಇವರಲ್ಲದೆ ಸಾವಿರಾರು ಕ್ರಿಕೆಟ್​ ಅಭಿಮಾನಿಗಳು ಪಾಂಡೆ ಅವರ ಅದ್ಭುತ ಬೌಲಿಂಗ್ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ದೇಶಾದ್ಯಂತ ಟ್ರೆಂಡ್​ ಆಗಿದೆ.

ದುರಾದೃಷ್ಟವಶಾತ್​ ಭಾರತ ಬೌಲರ್​ಗಳ ಸಾಹಸದ ಹೊರೆತಾಗಿಯೂ ಈ ಪಂದ್ಯದಲ್ಲಿ ಸೋಲು ಕಂಡಿತು. ಕೌರ್ ಬಳಗ ನೀಡಿದ್ದ 119 ರನ್​ಗಳ ಗುರಿಯನ್ನು ಆಸ್ಟ್ರೇಲಿಯಾ ಮಹಿಳಾ ತಂಡ 19.1 ಓವರ್​ಗಳಲ್ಲಿ ತಲುಪಿತು. ತಹಿಲಾ ಮೆಕ್​ಗ್ರಾತ್​ ಅಜೇಯ 42 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ಇದನ್ನು ಓದಿ:ಮಾರಕ ಬೌಲರ್​ಗೆ ಟೀಂ ಇಂಡಿಯಾ ಮಣೆ.. T-20 ವಿಶ್ವಕಪ್​​ ನೆಟ್​​ ಬೌಲರ್​ ಆಗಿ ಉಮ್ರಾನ್ ಮಲಿಕ್​ ಆಯ್ಕೆ

ABOUT THE AUTHOR

...view details