ಹೈದರಾಬಾದ್:ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಏಷ್ಯಾ ಕಪ್ ಕೈ ಚೆಲ್ಲಿದ ಬಗ್ಗೆ ಭಾರತೀಯ ಪತ್ರಕರ್ತನ ಪ್ರಶ್ನೆಯಿಂದ ಕುಪಿತಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಆ ಪತ್ರಕರ್ತನ ಫೋನ್ ಕಸಿದುಕೊಳ್ಳಲು ಮುಂದಾದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಿಸಿಬಿ ಅಧ್ಯಿಕ್ಷನ ವಿರುದ್ಧ ಟೀಕೆ ವ್ಯಕ್ತವಾಗಿದೆ.
"ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋತಿದೆ. ಈ ಬಗ್ಗೆ ಪಾಕಿಸ್ತಾನದ ಜನರಿಗೆ ಏನು ಉತ್ತರಿಸುತ್ತೀರಿ" ಎಂದು ಭಾರತೀಯ ಪತ್ರಕರ್ತ ಪ್ರಶ್ನಿಸುತ್ತಾನೆ. ಇದರಿಂದ ಕೋಪಗೊಂಡ ರಮಿಜ್ ರಾಜಾ "ನೀವು ಭಾರತೀಯ ಜರ್ನಲಿಸ್ಟೇ" ಎಂದು ಮರು ಪ್ರಶ್ನಿಸಿ, ಆತನ ಪ್ರಶ್ನೆಗೆ ಉತ್ತರಿಸಿದೇ ಕೈಯಲ್ಲಿದ್ದ ಮೊಬೈಲ್ ಅನ್ನು ಕಸಿದುಕೊಳ್ಳಲು ಯತ್ನ ನಡೆಸಿದರು.
ಪಾಕಿಸ್ತಾನ ಸೋತರೂ ಉತ್ತಮವಾಗಿ ಆಡಿದೆ. ಈ ಬಗ್ಗೆ ಸಂತೋಷ ಪಡಬೇಕು. ಆಟದಲ್ಲಿ ಸೋಲು ಗೆಲುವು ಸಹಜ ಎಂದು ಬಳಿಕ ಮಾಧ್ಯಮದವರಿಗೆ ಉತ್ತರಿಸಿದರು.