ಲಂಡನ್: ಕ್ರಿಕೆಟ್ ಕಾಶಿ ಲಾಡ್ಸ್ ಮೈದಾನದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಆಕರ್ಷಕ ಶತಕ ಬಾರಿಸಿ ಹೊಸ ದಾಖಲೆ ಬರೆದಿದ್ರು. ರಾಹುಲ್‌ಗೆ ಅಭಿನಂದನೆಗಳ ಮಹಾಪೂರ ಜೊತೆಗೆ ಅವರ ಆಟವನ್ನು ಎಲ್ಲರೂ ಕೊಂಡಾಡಿದ್ದರು. ಇದೀಗ ರಾಹುಲ್ ಬ್ಯಾಟ್‌ನಿಂದ ಸಿಡಿದ ರನ್‌ಗಳಿಗೆ ಮತ್ತೊಂದು ಬದಿಯಲ್ಲಿ ನಿಂತು ಬೆನ್ನುತಟ್ಟಿದ್ದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ ಫಿದಾ ಆಗಿದ್ದಾರೆ. ರಾಹುಲ್ ಬ್ಯಾಟ್‌ನಿಂದ ಬಂದಿರುವ ಶತಕ ಅತ್ಯುತ್ತಮ. ನಾನು ಹಿಂದೆಂದು ನೋಡಿರಲಿಲ್ಲ ಎಂದು ಶರ್ಮಾ ಹಾಡಿ ಹೊಗಳಿದ್ದಾರೆ.
ದಿನದಾಟದ ಬಳಿಕ ವರ್ಚುಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಆರಂಭದಿಂದಲೇ ಎಸೆತಗಳ ಮೇಲೆ ತುಂಬಾ ನಿಯಂತ್ರಣ ಸಾಧಿಸುತ್ತಿದ್ದ. ಯಾವುದೇ ಕ್ಷಣದಲ್ಲೂ ಗೊಂದಲ ಅಥವಾ ಎಸೆತ ಎದುರಿಸಲು ರಾಹುಲ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇಂದು ರಾಹುಲ್ ದಿನವಾಗಿತ್ತು. ನಿಜವಾಗಿಯೂ ಇದನ್ನು ಲೆಕ್ಕದಲ್ಲಿ ಇಟ್ಟುಕೊಳ್ಳುತ್ತಾನೆ. ಬ್ಯಾಟಿಂಗ್ ವೇಳೆ ಈತನ ಯೋಜನೆಗಳು ತುಂಬಾ ಸ್ಪಷ್ಟವಾಗಿದ್ದುವು. ಯಾವಾಗ ನಿಮ್ಮ ಯೋಜನೆಗಳನ್ನು ನಂಬುತ್ತಿರೋ ಆಗ ಅದು ಕೆಲಸ ಮಾಡುತ್ತೆ ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ತಂಡದಿಂದ ಹೊರಗುಳಿದ ಪರಿಣಾಮ ರಾಹುಲ್ ಸ್ಥಾನ ಪಡೆದು ಉತ್ತಮ ಪ್ರದರ್ಶ ನೀಡಿದ್ದಾರೆ. 11ರ ಬಳಗಳದಲ್ಲಿ ರಾಹುಲ್ ಆಡುವುದಿಲ್ಲ. ಮಯಾಂಕ್ ಆಡುತ್ತಾನೆ ಇಂತಹ ಯಾವುದೇ ಚರ್ಚೆಗಳು ನಾವು ಮಾಡಿರಲಿಲ್ಲ. ದೃರಾದುಷ್ಟವಶಾತ್ ಮಯಾಂಕ್ ಹೊರಗುಳಿಯಬೇಕಾಯಿತು. ರಾಹುಲ್‌ಗೆ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.