ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾದ ಬೌಲಿಂಗ್ ಎದುರಿಸುವಷ್ಟು ಸಾಮರ್ಥ್ಯ ಭಾರತದ ಬ್ಯಾಟರ್​ಗಳಿಗಿದೆ: ಚೇತೇಶ್ವರ್ ಪೂಜಾರ - ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್

ನಮ್ಮ ಈ ತಂಡ ಅಲ್ಲಿನ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಎಂದು ಕಲಿತಿದೆ. ಮತ್ತು ನಮ್ಮ ಬ್ಯಾಟಿಂಗ್ ಲೈನ್​ ಅಪ್​ ಅತ್ಯುತ್ತಮ ಸಮತೋಲನವನ್ನು ಹೊಂದಿದೆ. ಆದ್ದರಿಂದ ನಮ್ಮ ಬ್ಯಾಟರ್​ಗಳು ಅಲ್ಲಿನ ಬೌಲರ್​ಗಳನ್ನು ಎದುರಿಸಲು ಸಮರ್ಥರಿದ್ದಾರೆ ಮತ್ತು ನಮ್ಮ ತಯಾರಿ ಪರಿಗಣನೆಗೆ ತೆಗೆದುಕೊಂಡರೆ ಅಲ್ಲಿ ನಾವು ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Pujara on  South Africa tour
ಚೇತೇಶ್ವರ್ ಪೂಜಾರ

By

Published : Dec 23, 2021, 4:23 PM IST

ಸೆಂಚುರಿಯನ್​: ಪ್ರಸ್ತುತ ಭಾರತ ಬ್ಯಾಟಿಂಗ್ ಲೈನ್‌ಅಪ್ ದಕ್ಷಿಣ ಆಫ್ರಿಕಾದಲ್ಲಿನ ವೇಗಿಗಳಿಗೆ ನೆರವು ನೀಡುವ ಪಿಚ್​ಗಳಲ್ಲಿ ಚಲನೆಯುಳ್ಳ ವೇಗದ ಬೌಲಿಂಗ್​ಗೆ ಪ್ರತ್ಯುತ್ತರ ಕೊಡುವಷ್ಟು ಅನುಭವವನ್ನು ಹೊಂದಿದೆ ಎಂದಿರುವ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಚೇತೇಶ್ವರ್ ಪೂಜಾರ ವಿರಾಟ್ ಕೊಹ್ಲಿ ನೇತೃತ್ವದ ತಂಡ ಹರಿಣಗಳ ನಾಡಿನಲ್ಲಿ ಉತ್ತಮ ಪ್ರದರ್ಶನ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನಿ ವಿದೇಶಿ ಸರಣಿಯಲ್ಲಿನ ಭಾರತ ತಂಡದ ಯಶಸ್ಸು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್​ ಸರಣಿಯನ್ನು ಗೆಲ್ಲುವುದಕ್ಕೆ ನಮ್ಮ ಆಟಗಾರರಲ್ಲಿ ವಿಶ್ವಾಸವನ್ನುಂಟು ಮಾಡಿದೆ ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪೂಜಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀವು ಪ್ರವಾಸಿ ತಂಡವಾಗಿದ್ದಾಗ, ಅಲ್ಲಿ(ದ. ಆ) ವೇಗ ಮತ್ತು ಬೌನ್ಸ್​ಗೆ ಹೆಚ್ಚು ನೆರವಾಗುತ್ತದೆ ಎಂದು ತಿಳಿದಿರುತ್ತದೆ. ಜೊತೆಗೆ ಬೌಲಿಂಗ್​ನಲ್ಲಿ ವೈವಿದ್ಯಮಯ ಚಲನೆ ಹೊಂದಿರುತ್ತದೆ. ಹಾಗಾಗಿ ಭಾರತದಿಂದ ಹೋದಂತಹ ಬ್ಯಾಟರ್​ಗಳಿಗೆ ಅಲ್ಲಿನ ಬೌಲರ್​ಗಳನ್ನು ಎದುರಿಸುವುದು ಯಾವಾಗಲೂ ದೊಡ್ಡ ಸವಾಲಾಗಿರುತ್ತದೆ ಎಂದು ಪೂಜಾರಾ ಹೇಳಿದ್ದಾರೆ.

ನಮ್ಮ ಈ ತಂಡ ಅಲ್ಲಿನ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂದು ಕಲಿತಿದೆ. ಮತ್ತು ನಮ್ಮ ಬ್ಯಾಟಿಂಗ್ ಲೈನ್​ ಅಪ್​ ಅತ್ಯುತ್ತಮ ಸಮತೋಲನವನ್ನು ಹೊಂದಿದೆ. ಆದ್ದರಿಂದ ನಮ್ಮ ಬ್ಯಾಟರ್​ಗಳು ಅಲ್ಲಿನ ಬೌಲರ್​ಗಳನ್ನು ಎದುರಿಸಲು ಸಮರ್ಥರಿದ್ದಾರೆ ಮತ್ತು ನಮ್ಮ ತಯಾರಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಅಲ್ಲಿ ನಾವು ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಅನುಭವ ನೆರವಾಗಲಿದೆ:ಭಾರತ ತಂಡದಲ್ಲಿರುವ ಬಹುಪಾಲು ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದಾರೆ. ಇದೊಂದು ಅನುಭವಿಗಳ ತಂಡವಾಗಿದೆ ಮತ್ತು ಸರಣಿಯ ಪೂರ್ವ ಸಿದ್ಧತಾ ಭಾಗದಲ್ಲಿ ನಮ್ಮಿಂದ ಮ್ಯಾನೇಜ್​ಮೆಂಟ್​ ಏನನ್ನು ನಿರೀಕ್ಷಿಸುತ್ತಿದೆ ಎನ್ನುವುದು ನಮಗೆ ತಿಳಿದಿದೆ. ಬಹಳಷ್ಟು ತಂಡಗಳು ತವರಿನ ಪರಿಸ್ಥಿತಿಯಲ್ಲಿ ಚೆನ್ನಾಗಿ ಆಡುತ್ತವೆ.

ಇದೇ ದಕ್ಷಿಣ ಆಫ್ರಿಕಾ ತಂಡಕ್ಕೂ ಅನ್ವಯಿಸುತ್ತದೆ. ಅವರದು ವಿಶ್ವದ ಅತ್ಯುತ್ತಮ ಬೌಲಿಂಗ್ ಲೈನ್​ಅಪ್ ಹೊಂದಿರುವ ತಂಡಗಳಲ್ಲಿ ಒಂದಾಗಿದೆ. ಅಂತಹ ವಿಶ್ವಶ್ರೇಷ್ಠ ಬೌಲರ್​ಗಳನ್ನು ಎದುರಿಸುವುದು ಒಂದು ಸವಾಲಾಗಲಿದೆ ಎಂದಿದ್ದಾರೆ.

ಇಂಗ್ಲೆಂಡ್-ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವು ಆತ್ಮ ವಿಶ್ವಾಸ ಹೆಚ್ಚಿಸಿದೆ

ಭಾರತ ತಂಡ ಕಳೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 2-1ರಲ್ಲಿ ಟೆಸ್ಟ್​ ಸರಣಿಯನ್ನು ಜಯಿಸಿದೆ. ಈ ಎರಡು ರಾಷ್ಟ್ರಗಳಲ್ಲಿ ಉತ್ತಮ ಪ್ರದರ್ಶನ ತೋರಿರುವುದು ತಂಡದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದು, ವಿಶ್ವದ ಯಾವುದೇ ರಾಷ್ಟ್ರದಲ್ಲಿ ಸರಣಿ ಗೆಲ್ಲಬಲ್ಲವು ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜೊತೆಗೆ ನಾವು ವಿಶ್ವಶ್ರೇಷ್ಠ ಬೌಲಿಂಗ್ ಲೈನ್ ​ಅಪ್ ಹೊಂದಿರುವುದರಿಂದ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ​ ಎಂದು 33 ವರ್ಷದ ರಾಜ್​ಕೋಟ್ ಕ್ರಿಕೆಟಿಗ ಹೇಳಿದ್ದಾರೆ.

ABOUT THE AUTHOR

...view details