ಅಡಿಲೇಡ್ (ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಸೋಲಿನ ಬಳಿಕ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ತಂಡದ ಕೋಚ್ ರಾಹುಲ್ ದ್ರಾವಿಡ್ ಸಮಾಧಾನ ಪಡಿಸಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ 10 ವಿಕೆಟ್ಗಳಿಂದ ಸೋಲು ಕಂಡಿದೆ. ಅಲೆಕ್ಸ್ ಹೇಲ್ಸ್ 47 ಎಸೆತಗಳಲ್ಲಿ 86 ರನ್ ಹಾಗೂ ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್ ಬಾರಿಸಿ ಭಾರತದ ಬೌಲರ್ಗಳ ಬೆವರು ಇಳಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಇದನ್ನೂ ಓದಿ:T20 World Cup: ಟೀಂ ಇಂಡಿಯಾದ ಫೈನಲ್ ಕನಸು ಭಗ್ನ... ಇಂಗ್ಲೆಂಡ್ಗೆ 10 ವಿಕೆಟ್ಗಳ ಭರ್ಜರಿ ಗೆಲುವು
ಈ ಹೀನಾಯ ಸೋಲಿನಿಂದ ನಾಯಕ ರೋಹಿತ್ ಶರ್ಮಾ ಸಂಪೂರ್ಣ ನಿರಾಶೆಗೊಂಡು ಕಣ್ಣೀರು ಸುರಿಸಿದ್ದಾರೆ. ಏಕಾಂಗಿಯಾಗಿ ಕುಳಿತು ರೋಹಿತ್ಕಣ್ಣೀರು ಹಾಕಿದ್ದಾರೆ. ಆಗ ಪಕ್ಕದಲ್ಲೇ ಕುಳಿತಿದ್ದ ದ್ರಾವಿಡ್ ಬೆನ್ನು ತಟ್ಟಿ ಸಮಾಧಾನ ಮಾಡಿದ್ದಾರೆ. ರೋಹಿತ್ ಕಣ್ಣೀರು ಹಾಕುವ ಮತ್ತು ದ್ರಾವಿಡ್ ಸಾಂತ್ವನ ಹೇಳುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ಟೀಂ ಇಂಡಿಯಾದ ಬ್ಯಾಟಿಂಗ್ ಶೈಲಿ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ