ಹೋಬಾರ್ಟ್ (ಆಸ್ಟ್ರೇಲಿಯಾ): ಇತ್ತೀಚಿನ ದಿನಗಳಲ್ಲಿ ಬೌಂಡರಿ ಬಳಿಯ ರಿಲೇ ಕ್ಯಾಚ್‌ಗಳು ಕ್ರಿಕೆಟ್‌ನಲ್ಲಿ ರೂಢಿಯಾಗಿವೆ. ಆದರೆ, ಅವುಗಳ ಹೊರತಾಗಿಯೂ ಈ ಕ್ಯಾಚ್ ಮಾತ್ರ ಸಂಪೂರ್ಣ ವಿಭಿನ್ನವಾಗಿದ್ದು, ಅಭಿಮಾನಿಗಳನ್ನು ಚಕಿತಗೊಳಿಸುತ್ತದೆ.
ಶನಿವಾರ ಹೋಬರ್ಟ್‌ನ ಬ್ಲಂಡ್‌ಸ್ಟೋನ್ ಅರೆನಾದಲ್ಲಿ ಹಾಜರಿದ್ದ ಪ್ರೇಕ್ಷಕರಿಗೆ ನಿಖರವಾಗಿ ಏನಾಯಿತು ಎಂಬುದೇ ತಕ್ಷಣಕ್ಕೆ ತಿಳಿಯಲಿಲ್ಲ. ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ಮಹಿಳಾ ಬಿಗ್ ಬ್ಯಾಷ್ ಲೀಗ್ ನಡುವೆ ಇಂಥಹದೊಂದು ವಿಭಿನ್ನ ಪ್ರಯತ್ನ ನಡೆದಿದೆ. ಬ್ರಿಜೆಟ್ ಪ್ಯಾಟರ್ಸನ್ ಅವರು ಒಂದು ಕೈನಲ್ಲಿಯೇ ಕ್ಯಾಚ್ ಹಿಡಿದು ಮತ್ತೆ ಪೆವಿಲಿಯನ್‌ಗೆ ಬಾಲ್ ಎಸೆದಿದ್ದಾರೆ.