ಕರ್ನಾಟಕ

karnataka

ETV Bharat / sports

watch : ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಎಬಿಡಿ.. ಮಗನ ರಿಯಾಕ್ಷನ್​ ಹೀಗಿತ್ತು ನೋಡಿ.. - ಎಬಿಡಿ ಕಳಪೆ ಪ್ರದರ್ಶನ

ಎಬಿಡಿ ಔಟಾಗುತ್ತಿದ್ದಂತೆ ತಾಯಿ ಡೇನಿಯಲ್​ ಜೊತೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮಗ ಬೇಸರದಿಂದ ತಮ್ಮ ಮುಂದಿರುವ ಚೇರ್​ಗೆ ಗುದ್ದಿದ್ದಾರೆ. ಆದರೆ, ಕೋಪದಲ್ಲಿ ಗುದ್ದಿದ್ದರಿಂದ ನೋವು ಕೂಡ ಅನುಭವಿಸಿದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ..

AB de Villiers' son
ಎಬಿ ಡಿ ವಿಲಿಯರ್ಸ್

By

Published : Sep 27, 2021, 5:27 PM IST

Updated : Sep 27, 2021, 5:42 PM IST

ದುಬೈ :ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎನಿಸಿಕೊಂಡಿದ್ದ ಎಬಿ ಡಿ ವಿಲಿಯರ್ಸ್ ಕಳೆದ ಮೂರು ಪಂದ್ಯಗಳಿಂದ ವೈಫಲ್ಯ ಅನುಭವಿಸಿದ್ದಾರೆ. ಯುಎಇನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 0,12, 11 ರನ್​ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.

ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ವಿಲಿಯರ್ಸ್, ಭಾರತದಲ್ಲಿ ನಡೆದಿದ್ದ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಯುಎಇಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವುದು ಆರ್​ಸಿಬಿ ಅಭಿಮಾನಿಗಳಿಗೆ ಬಹಳ ನಿರಾಶೆ ತಂದಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲದೆ, ಸ್ವತಃ ವಿಲಿಯರ್ಸ್ ಮಗ ಕೂಡ ತಂದೆ ವಿಕೆಟ್​ ಒಪ್ಪಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿರೋ ವಿಡಿಯೋವೊಂದು ವೈರಲ್ ಆಗುತ್ತಿದೆ.

ಬುಮ್ರಾ ಎಸೆದ 17ನೇ ಓವರ್​ನಲ್ಲಿ ಎಬಿಡಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್​ ಸಿಡಿಸಿದ್ದರು. ಆದರೆ, 19ನೇ ಓವರ್​ನಲ್ಲಿ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿದ ಬುಮ್ರಾ ಮ್ಯಾಕ್ಸ್​ವೆಲ್ ಮತ್ತು ಎಬಿಡಿಯನ್ನು ಸತತ 2 ಎಸೆತಗಳಲ್ಲಿ ಪೆವಿಲಿಯನ್​ಗಟ್ಟಿದರು.

ಎಬಿಡಿ ಔಟಾಗುತ್ತಿದ್ದಂತೆ ತಾಯಿ ಡೇನಿಯಲ್​ ಜೊತೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮಗ ಬೇಸರದಿಂದ ತಮ್ಮ ಮುಂದಿರುವ ಚೇರ್​ಗೆ ಗುದ್ದಿದ್ದಾರೆ. ಆದರೆ, ಕೋಪದಲ್ಲಿ ಗುದ್ದಿದ್ದರಿಂದ ನೋವು ಕೂಡ ಅನುಭವಿಸಿದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ.

ಅದಾಗ್ಯೂ, ರಾಯಲ್​ ಚಾಲೆಂಜರ್ಸ್ ಬೆಂಗಳೂರು 166 ರನ್​ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡಿದೆ. ಅದ್ಭುತವಾಗಿ ಬೌಲಿಂಗ್ ಮಾಡಿದ ಆರ್​ಸಿಬಿ ಬೌಲರ್​ಗಳು ಮುಂಬೈ ಇಂಡಿಯನ್ಸ್ ತಂಡವನ್ನು 111ರನ್​ಗಳಿಗೆ ಆಲೌಟ್ ಮಾಡುವ ಮೂಲಕ 54 ರನ್​ಗಳಿಂದ ಜಯ ಸಾಧಿಸಿತು.

ಇದನ್ನು ಓದಿ:IPL 2021: ಮುಂಬೈ ವಿರುದ್ಧ 54 ರನ್​ಗಳ ಭರ್ಜರಿ ಜಯ ಸಾಧಿಸಿದ ಆರ್​ಸಿಬಿ

Last Updated : Sep 27, 2021, 5:42 PM IST

ABOUT THE AUTHOR

...view details