ಕರ್ನಾಟಕ

karnataka

ETV Bharat / sports

'ಹುಡ್ಗೀರು ಇಷ್ಟೊಂದು ಸಲ ತಮ್ಮ DP ಕೂಡ ಚೇಂಜ್ ಮಾಡಲ್ಲ': ಲಂಕಾ ಕ್ರಿಕೆಟ್​ ಟ್ರೋಲ್​ ಮಾಡಿದ ಜಾಫರ್​ - ಲಂಕಾ ಕ್ರಿಕೆಟ್​ ಬೋರ್ಡ್​​

ಶ್ರೀಲಂಕಾ ಕ್ರಿಕೆಟ್ ಬೋರ್ಡ್​ ಕಳೆದ 4 ವರ್ಷದಲ್ಲಿ ಬರೋಬ್ಬರಿ 10 ಆಟಗಾರರಿಗೆ ನಾಯಕತ್ವ ಜವಾಬ್ದಾರಿ ನೀಡಿದ್ದು, ಇದೇ ವಿಚಾರವನ್ನಿಟ್ಟುಕೊಂಡು ವಾಸೀಂ ಜಾಫರ್​ ಲಂಕಾ ಬೋರ್ಡ್​​ನ ಟ್ರೋಲ್​ ಮಾಡಿದ್ದಾರೆ.

Sri lanka cricket team
Sri lanka cricket team

By

Published : Jul 9, 2021, 9:57 PM IST

ಹೈದರಾಬಾದ್​:ಮೇಲಿಂದ ಮೇಲೆ ತಂಡದ ನಾಯಕತ್ವ ಬದಲಾವಣೆ ಮಾಡುತ್ತಿರುವ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​​ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೇ ವಿಚಾರವನ್ನಿಟ್ಟುಕೊಂಡು ವ್ಯಂಗ್ಯವಾಗಿ ಟ್ವೀಟ್ ಮಾಡಿ ಅಲ್ಲಿನ ಕ್ರಿಕೆಟ್​ ಬೋರ್ಡ್​ ಕಾಲೆಳೆದಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​ ಸರಣಿ ವೇಳೆ ಸಂಪೂರ್ಣವಾಗಿ ಮುಖಭಂಗ ಅನುಭವಿಸಿರುವ ಕಾರಣ ತಂಡದ ನಾಯಕತ್ವ ಇದೀಗ ಮತ್ತೊಮ್ಮೆ ಬದಲಾವಣೆ ಮಾಡಲಾಗಿದೆ. ಕುಶಾಲ್​ ಪರೇರಾ ಬದಲಿಗೆ ಆಲ್​ರೌಂಡರ್​​ ದನುಷ್​ ಶನಕ್​ಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದ್ದು, ಟೀಂ ಇಂಡಿಯಾ ವಿರುದ್ಧ ಇವರ ನೇತೃತ್ವದ ಬಳಗ ಮೈದಾನಕ್ಕಿಳಿಯಲಿದೆ.

ಇದೇ ವಿಚಾರವಾಗಿ ಟ್ವಿಟ್ ಮಾಡಿರುವ ವಾಸೀಂ ಜಾಫರ್, ಇಷ್ಟೊಂದು ಸಲ ಹುಡುಗಿಯರು ತಮ್ಮ ಡಿಪಿ ಕೂಡ ಬದಲಿಸುವುದಿಲ್ಲ. ಆದರೆ ಶ್ರೀಲಂಕಾ ಅಷ್ಟೊಂದು ನಾಯಕರ ಬದಲಾವಣೆ ಮಾಡಿದೆ.(Yaar itne to ladke dp nahi badalte jitne SL ne captain badle hai)​ ​​ ಎಂದಿದ್ದಾರೆ. 2017ರಿಂದಲೂ ಶ್ರೀಲಂಕಾ 10 ಆಟಗಾರರಿಗೆ ನಾಯಕತ್ವ ಜವಾಬ್ದಾರಿ ನೀಡಿದ್ದು, ಮೊದಲು ತರಂಗ್​, ಮ್ಯಾಥ್ಯೂಸ್​, ಕಪುಗೆದರಾ, ಮಲಿಂಗಾ, ಪರೇರಾ, ಚಾಂಡಿಮಾಲ್​, ಕರುಣರತ್ನೆ, ತಿರುಮನ್ನೆ, ಪರೇರಾ ಇದೀಗ ಶನಕ್​ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿರಿ: ನೆಲಕಚ್ಚಿದ ಶ್ರೀಲಂಕಾ ಕ್ರಿಕೆಟ್‌ ತಂಡ: ಸಂಭಾವನೆ ಪಡೆಯದೆ ತಂಡ ಕಟ್ಟಲು ಪಣತೊಟ್ಟ ಜಯವರ್ಧನೆ

ಮೇಲಿಂದ ಮೇಲೆ ನಾಯಕತ್ವ ಬದಲಾವಣೆ ಮಾಡುತ್ತಿರುವ ಕಾರಣ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಜತೆಗೆ ಅಲ್ಲಿನ ಕ್ರಿಕೆಟ್​ ಮಂಡಳಿ ಜೊತೆ ವಾರ್ಷಿಕ ಒಪ್ಪಂದ ವಿಚಾರವಾಗಿ ಕೂಡ ಮುಸುಕಿನ ಗುದ್ದಾಟ ನಡೆಯುತ್ತಿದೆ.

ABOUT THE AUTHOR

...view details