ಲಾಹೋರ್: ಪಾಕಿಸ್ತಾನದ ಮಾಜಿ ನಾಯಕ ಹಾಗೂ ಜಗತ್ತು ಕಂಡಂತಹ ಶ್ರೇಷ್ಠ ವೇಗಿ ವಾಸಿಮ್ ಅಕ್ರಂ ಬುಧವಾರ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ಫೋಟೋ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡಿದೆ. ಅಕ್ರಮ್ ಬೋಳುತಲೆಯ ಫೋಟೋವನ್ನು ಶೇರ್ ಮಾಡಿದ್ದು, ಅದರಲ್ಲಿ ಅಕ್ರಂ ತುಂಬಾ ವಯಸ್ಸಾದವರಂತೆ ಕಾಣುತ್ತಿದ್ದಾರೆ.
12 ದಿನಗಳ ಕ್ವಾರಂಟೈನ್ ನಂತರ ಮತ್ತು ನನ್ನ ರೇಜರ್ ಅನ್ನು ಹುಡುಕಿದ ನಂತರ ಹೀಗಿದ್ದೇನೆ... ಈಗ ಸಂತೋಷವಾಗಿದೆಯೇ? #QuarantineLife ಎಂದು ಬರೆದುಕೊಂಡು ಬೋಳುತಲೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಸ್ವಿಂಗ್ ತಂತ್ರಗಾರಿಕೆಯಿಂದ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ಮನ್ಗಳನ್ನ ನಿದ್ದೆಗೆಡಿಸಿದ್ದ ಪಾಕಿಸ್ತಾನ ಮಾಜಿ ನಾಯಕನ ಈ ಫೋಟೋ ನೈಜವಲ್ಲ, ಇದು ಕೇವಲ ಸಾಫ್ಟ್ವೇರ್ ಬಳಸಿ ಎಡಿಟ್ ಮಾಡಿರುವ ಪೋಟೋ ಎಂಬುದು ಸ್ಪಷ್ಟವಾಗಿ ತೋರುತ್ತಿದೆ, ಆದರೂ ಅಕ್ರಂ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಹೊಸ ಅವತಾರದ ಫೋಟೋ ನೋಡಿ ಕೆಲವರು ನಿಮಗೆ ವಯಸ್ಸಾಗಿದೆ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಅದೇ ಫೋಟೋ ಎಡಿಟ್ ಮಾಡಿ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಕೆಲವು ಅಮೆರಿಕನ್ ಕಾಮಿಡಿಯನ್ ಲ್ಯಾರಿ ಡೇವಿಡ್ ಅವರ ರೀತಿ ಕಾಣುತ್ತೀರಾ ಎಂದು ಹಲವಾರು ಫೋಟೋಗಳನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನು ಓದಿ:'ನನ್ನಿಂದ ಯುವಕರಿಗೆ ಅನ್ಯಾಯವಾಗುವುದು ಬೇಡ': ವಿಶ್ವಕಪ್ನಿಂದ ಹಿಂದೆ ಸರಿದ ತಮೀಮ್ ಇಕ್ಬಾಲ್