ಕರ್ನಾಟಕ

karnataka

ETV Bharat / sports

ಫಿಟ್ನೆಸ್‌ಗಾಗಿ ರೋಹಿತ್​ ಶರ್ಮಾ ಹೆಚ್ಚು ಶ್ರಮಿಸಬೇಕು: ಮಣಿಂದರ್ ಸಿಂಗ್ - ಟೀಂ ಇಂಡಿಯಾ

ಟೀಂ ಇಂಡಿಯಾದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಫಿಟ್ನೆಸ್‌ಗಾಗಿ ಶ್ರಮಿಸಬೇಕು ಎಂದು ಮಾಜಿ ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ ಸಲಹೆ ನೀಡಿದ್ದಾರೆ.

warning-indian-cricket-team-captain-rohit-sharma-due-to-fitness
ಫಿಟ್ನೆಸ್‌ಗಾಗಿ ರೋಹಿತ್​ ಶರ್ಮಾ ಹೆಚ್ಚು ಶ್ರಮಿಸಬೇಕು: ಮಣಿಂದರ್ ಸಿಂಗ್

By

Published : Dec 3, 2022, 4:32 PM IST

ನವದೆಹಲಿ:ಭಾರತ ಮತ್ತು ಬಾಂಗ್ಲಾದೇಶದ ನಡುವೆ ಏಕದಿನ ಏಕದಿನ ಸರಣಿಯು ನಾಳೆಯಿಂದ ಆರಂಭವಾಗಲಿದೆ. ಟೀಂ ಇಂಡಿಯಾದ ಏಕದಿನ ನಾಯಕರಾಗಿ ತಂಡಕ್ಕೆ ಮರಳಿರುವ ರೋಹಿತ್ ಶರ್ಮಾ ಅವರ ಫಿಟ್ನೆಸ್‌ ಬಗ್ಗೆ ಮಾಜಿ ಆಟಗಾರರು ಸಲಹೆ ನೀಡುವುದರೊಂದಿಗೆ ಕೆಲ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.

ರೋಹಿತ್​ ಶರ್ಮಾ ಅವರ ನಾಯಕತ್ವ ಮತ್ತು ವೃತ್ತಿಜೀವನವನ್ನು ಇನ್ನಷ್ಟು ಸದೃಢವಾಗಬೇಕಾದರೆ ಫಿಟ್ನೆಸ್‌ಗೆ ಹೆಚ್ಚು ಒತ್ತುಕೊಡಬೇಕು. ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್​ ದೃಷ್ಠಿಯಿಂದಲೂ ರೋಹಿತ್​ ಹೆಚ್ಚು ಶ್ರಮಿಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.

ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ಮತ್ತು ಈಗ ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ಮರಳುತ್ತಿರುವ ಬಗ್ಗೆ ಭಾರತದ ಮಾಜಿ ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ ಮಾತನಾಡಿದ್ದು, ರೋಹಿತ್​ ಶರ್ಮಾ ಇನ್ನೂ ಸಾಕಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಉದಾಹರಣೆ: ಆದರೆ, ವಯಸ್ಸಾದಂತೆ ಪ್ರತಿವರ್ತನಗಳು ನಿಧಾನವಾಗುತ್ತವೆ. ಫಿಟ್ನೆಸ್‌ಗಾಗಿ ನೀವು ಸ್ವಲ್ಪ ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದಿರುವ ಮಣಿಂದರ್ ಸಿಂಗ್, ವಿರಾಟ್ ಕೊಹ್ಲಿ ಅವರನ್ನು ಉದಾಹರಣೆಯಾಗಿ ನೀಡಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಶ್ರಮಪಡಬೇಕಾದ ಅಂಶವನ್ನು ನಾನು ನೋಡಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ, ರೋಹಿತ್​ ಶರ್ಮಾ ತನ್ನ ವೃತ್ತಿಜೀವನವನ್ನು ವಿಸ್ತರಿಸಲು ಬಯಸಿದರೆ, ಅವರಿದ್ದ ಸಮಯದೊಂದಿಗೆ ಫಿಟ್ನೆಸ್‌ಗಾಗಿ ಶ್ರಮಿಸಬೇಕು ಮತ್ತು ಹಿಂದೆ ಮಾಡಿದ ತಪ್ಪುಗಳನ್ನು ವಿಶ್ಲೇಷಿಸಿಕೊಳ್ಳಬೇಕೆಂದೂ ಮಣಿಂದರ್ ಸಿಂಗ್ ಸಲಹೆ ನೀಡಿದ್ದಾರೆ.

ಒಬ್ಬ ನಾಯಕನಾಗಿಯೂ ರೋಹಿತ್​ ಆಲೋಚಿಸಬೇಕು. ಒಬ್ಬ ನಾಯಕ ಉತ್ತಮ ಪ್ರದರ್ಶನ ನೀಡಿದಾಗ, ಅದು ತಂಡದ ಮೇಲೂ ಪರಿಣಾಮ ಬೀರುತ್ತದೆ. ಆದರೆ, ನಾಯಕ ಉತ್ತಮ ಪ್ರದರ್ಶನ ನೀಡದಿದ್ದಾಗ ತಂಡದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇಷ್ಟು ದಿನದ ವಿಶ್ರಾಂತಿ ಹಿಂದಿನ ನ್ಯೂನತೆಗಳನ್ನು ತಿದ್ದಿಕೊಳ್ಳಲು ಅವರಿಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ರೋಹಿತ್​ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೆಎಲ್ ರಾಹುಲ್ ಆಟ ಕಾದು ನೋಡುಬೇಕು:ಇದೇ ವೇಳೆ, ಬಾಂಗ್ಲಾ ಸರಣಿಗೆಭಾರತ ತಂಡದ ಉಪನಾಯಕರಾದ ಕೆಎಲ್ ರಾಹುಲ್ ಕುರಿತು ಮಣಿಂದರ್ ಸಿಂಗ್ ಮಾತನಾಡಿದ್ದಾರೆ. ಕೆಎಲ್​ ರಾಹುಲ್​ ಆರಂಭಿಕ ಆಟಗಾರ ಅಥವಾ ಮಧ್ಯಮ ಕ್ರಮಾಂಕದಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಕೆಎಲ್ ರಾಹುಲ್ ಬಗ್ಗೆ ಸಾಕಷ್ಟು ಮಾತನಾಡುವ ಅವಶ್ಯಕತೆಯಿದೆ. ಏಕೆಂದರೆ ಜಿಂಬಾಬ್ವೆ ಸರಣಿಯ ನಂತರ ಅವರು ದೀರ್ಘಕಾಲದ ಗಾಯದಿಂದ ಮರಳಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು ಮೊದಲ 5-6 ಓವರ್‌ಗಳಲ್ಲಿ ನೆಲೆಗೊಳ್ಳಲು ಬಳಸಬಹುದೆಂದು ಯೋಚಿಸುವುದಿಲ್ಲ. ಒಬ್ಬ ಆಟಗಾರರ ಮೊದಲ 10 ಓವರ್‌ಗಳ ಲಾಭವನ್ನು ಪಡೆಯಬೇಕು. ಆರಂಭಿಕ ಓವರ್‌ಗಳಲ್ಲಿ ಕೆಲವೇ ರನ್ ಗಳಿಸಿದರೆ ಅದು ಸರಿಯಲ್ಲ ಎಂಬ ಅಭಿಪ್ರಾಯವನ್ನೂ ಮಣಿಂದರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಮೊಹಮ್ಮದ್ ಶಮಿ ಔಟ್​, ಉಮ್ರಾನ್​ ಮಲಿಕ್​ಗೆ ಅವಕಾಶ

ABOUT THE AUTHOR

...view details