ಕರ್ನಾಟಕ

karnataka

ETV Bharat / sports

ದಿ ಹಂಡ್ರೆಡ್‌ ಟೂರ್ನಿಯಿಂದ ಹೊರಬಂದ ವಾರ್ನರ್, ಸ್ಟೋನಿಸ್ - ಇಸಿಬಿ

ದಿ ಹಂಡ್ರೆಡ್ ಟೂರ್ನಿ ಜುಲೈ 21 ರಿಂದ ಆಗಸ್ಟ್ 21 ರವರೆಗೆ ನಡೆಯಲಿದ್ದು, ವಿಶ್ವದಾದ್ಯಂತದ ಹಲವು ಸ್ಟಾರ್​ ಆಟಗಾರರರು ಇದರಲ್ಲಿ ಆಡಲಿದ್ದಾರೆ. ಸದರ್ನ್ ಬ್ರೇವ್ ಫ್ರ್ಯಾಂಚೈಸಿ ವಾರ್ನರ್ ಮತ್ತು ಸ್ಟೋನಿಸ್‌ರನ್ನು ಕ್ರಮವಾಗಿ 100,000 ಮತ್ತು 80,000 ಪೌಂಡ್‌ ನೀಡಿ ಪಡೆದುಕೊಂಡಿತ್ತು.

Warner, Stoinis pull out of The Hundred
ದಿ ಹಂಡ್ರೆಡ್‌ ಟೂರ್ನಿಯಿಂದ ಹೊರಬಂದ ವಾರ್ನರ್, ಸ್ಟೋನಿಸ್

By

Published : Jun 11, 2021, 4:07 PM IST

ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಯೋಜಿಸಿರುವ ದಿ ಹಂಡ್ರೆಡ್‌ ಪಂದ್ಯಾವಳಿಯಿಂದ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋನಿಸ್ ಹೊರಬಂದಿದ್ದಾರೆ.

ದಿ ಹಂಡ್ರೆಡ್ ಟೂರ್ನಿ ಜುಲೈ 21 ರಿಂದ ಆಗಸ್ಟ್ 21 ರವರೆಗೆ ನಡೆಯಲಿದ್ದು, ವಿಶ್ವದಾದ್ಯಂತದ ಹಲವು ಸ್ಟಾರ್​ ಆಟಗಾರರರು ಇದರಲ್ಲಿ ಆಡಲಿದ್ದಾರೆ. ಸದರ್ನ್ ಬ್ರೇವ್ ಫ್ರ್ಯಾಂಚೈಸಿ ವಾರ್ನರ್ ಮತ್ತು ಸ್ಟೋನಿಸ್‌ರನ್ನು ಕ್ರಮವಾಗಿ 100,000 ಮತ್ತು 80,000 ಪೌಂಡ್‌ ನೀಡಿ ಪಡೆದುಕೊಂಡಿತ್ತು.

"ಡೇವಿಡ್ ಮತ್ತು ಮಾರ್ಕಸ್ ಅವರು ಈ ಟೂರ್ನಿಯಲ್ಲಿ ಆಡುತ್ತಿಲ್ಲ ಎನ್ನುವುದು ಬಹಳ ನಿರಾಶಾದಾಯಕವಾಗಿದೆ. ಕೆಲವು ಆಟಗಾರರು ಕೋವಿಡ್​ ಕಾರಣದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಇನ್ನೂ ಕೆಲವರು ಬೇರೆ ಬೇರೆ ಸರಣಿ ಆಡುತ್ತಿದ್ದು ಆ ಕಾರಣದಿಂದ ಆಡುತ್ತಿಲ್ಲ" ಎಂದು ಇಸಿಬಿ ಮಾಧ್ಯಮವೊಂದಕ್ಕೆ ತಿಳಿಸಿದೆ.

ಈ ಆಟಗಾರರ ಬದಲಾಗಿ ಸದರ್ನ್ ಬ್ರೇವ್ ಬೇರೆ ಆಟಗಾರರನ್ನು ಸಂಪರ್ಕಿಸಿದ್ದು ಅವರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಗಳಿಗೆ ಆಯ್ಕೆಯಾದ 23 ಸದಸ್ಯರ ಪಟ್ಟಿಯಲ್ಲಿ ವಾರ್ನರ್ ಮತ್ತು ಸ್ಟೋನಿಸ್ ಅವಕಾಶ ಪಡೆದ ಕಾರಣ ಈ ಟೂರ್ನಿ ಆಡುತ್ತಿಲ್ಲ ಎನ್ನಲಾಗಿದೆ.

ABOUT THE AUTHOR

...view details