ಕರ್ನಾಟಕ

karnataka

ETV Bharat / sports

ಮೊಣಕೈ ಗಾಯ: ಇಂದೋರ್​, ಅಹಮದಾಬಾದ್ ಪಂದ್ಯದಿಂದ ಡೇವಿಡ್​​ ವಾರ್ನರ್​ ಔಟ್​..! - ಬಾರ್ಡರ್​ ಗವಾಸ್ಕರ್​ ಟ್ರೋಪಿ

ದೆಹಲಿ ಟೆಸ್ಟ್​ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ವಾರ್ನರ್ ಬದಲಿಗೆ ಬ್ಯಾಟಿಂಗ್ ಮಾಡಲು ಹೊರಬಂದ ಟ್ರಾವಿಸ್ ಹೆಡ್, ಮಾರ್ಚ್ 1 ರಿಂದ ಪ್ರಾರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ಉಸ್ಮಾನ್ ಖವಾಜಾ ಅವರೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ.

warner-ruled-out-of-indore-and-ahmedabad-tests-due-to-elbow-injury
ಮೊಣಕೈ ಗಾಯದಿಂದ ಇಂದೋರ್​, ಅಹಮದಾಬಾದ್ ಪಂದ್ಯದಿಂದ ವಾರ್ನರ್​ ಔಟ್​...!

By

Published : Feb 21, 2023, 4:44 PM IST

ನವದೆಹಲಿ:ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಅವರು ಮೊಣಕೈ ಮೂಳೆ ಮುರಿತಕ್ಕೆ ಒಳಗಾಗಿ ಬಾರ್ಡರ್​ - ಗಾವಸ್ಕರ್​ ಟೆಸ್ಟ್​ ಸರಣಿಯ ಕೊನೆಯ ಎರಡು ಟೆಸ್ಟ್​ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಮೊದಲೆರಡು ಪಂದ್ಯಗಳನ್ನು ಸೋತು ಅಘಾತದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಇದು ಮತ್ತಷ್ಟು ಹೊಡೆತ ನೀಡಿದೆ. ವಾರ್ನರ್​ ಅವರು ಚೇತರಿಸಿಕೊಳ್ಳಲು ಸಿಡ್ನಿಗೆ ವಾಪಸ್​ ಆಗುತ್ತಿದ್ದಾರೆ. ಆದರೆ 3 ಪಂದ್ಯಗಳ ಏಕದಿನ ಸರಣಿಗೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

‘‘ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ವಾರ್ನರ್​ ಮೊಣಕೈಗೆ ಬಾಲ್ ಬಡಿದು ಮೂಳೆ ಮುರಿತವಾಗಿದೆ. ತಪಾಸಣೆಯ ನಂತರ ಚೇತರಿಸಿಕೊಳ್ಳಲು ವಿಶ್ರಾಂತಿಯ ಅವಶ್ಯಕತೆ ಇದ್ದು, ಸರಣಿಯ ಕೊನೆಯ ಎರಡು ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮಾರ್ಚ್​ 17ರಿಂದ ಆರಂಭವಾಗುವ ಅಂತಾರಾಷ್ಟ್ರೀಯ ಏಕದಿನ ಸರಣಿಗೆ ಭಾರತಕ್ಕೆ ಮರುಳುತ್ತಾರೆ ಎಂದು ನಿರೀಕ್ಷಿಸಲಾಗಿದೆ’’ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ ಎಸೆತ ಕೈಗೆ ತಗುಲಿ ತಲೆಗೆ ಬಡಿದು ಗಾಯಗೊಂಡಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ವಾರ್ನರ್​ ಬದಲಿಗೆ ಮ್ಯಾಥ್ಯೂ ರೆನ್​ಶಾ ಅವರು ಬದಲಿ ಆಟಗಾರರಾಗಿ ಕಣಕ್ಕಿಳಿದಿದ್ದರು. ಫಾರ್ಮ್​ ಕಳೆದುಕೊಂಡಿರುವ 36 ವರ್ಷದ ಡೇವಿಡ್​ ವಾರ್ನರ್​ ಸರಣಿಯಲ್ಲಿ ಆಡಿರುವ ಮೂರು ಇನ್ನಿಂಗ್ಸ್​ಗಳಲ್ಲಿ ಕೇವಲ 26 ರನ್​ ಗಳಿಸಿದ್ದಾರೆ. ‘‘ಈ ಪರಿಸ್ಥಿತಿಯಲ್ಲಿ ವಾರ್ನರ್​ಗೆ ಬಹಳ ನೋವಾಗಿದೆ, ಈ ಹಂತದಲ್ಲಿ ಡೇವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಆತುರವಿಲ್ಲ‘‘ ಎಂದು ಆಸ್ಟ್ರೇಲಿಯಾದ ಕೋಚ್​ ಆಂಡ್ಯ್ರೂ ಮೆಕ್​ಡೊನಾಲ್ಡ್​ ವಾರ್ನರ್ ಹೇಳಿದ್ದಾರೆ.

ಆರಂಭಿಕನಾಗಿ ಟ್ರಾವಿಸ್​ ಹೆಡ್​..!? :ದೆಹಲಿ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್​ನಲ್ಲಿ ವಾರ್ನರ್​ ಬದಲಿಗೆ ಆರಂಭಿಕರಾಗಿ ಬ್ಯಾಟಿಂಗ್​​ ಆಡಲು ಬಂದ ಟ್ರಾವಿಸ್​ ಹೆಡ್​, ಮಾರ್ಚ್​ 1 ರಿಂದ ಇಂದೋರ್​ ಪ್ರಾರಂಭವಾಗುವ ಮೂರನೇ ಟಸ್ಟ್​ನಲ್ಲಿ ಉಸ್ಮಾನ್​ ಖವಾಜ್​​ ಜೊತೆ ಆರಂಭ ಮಾಡುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ತಂಡ ಜೋಶ್​ ಹ್ಯಾಜಲ್​ವುಡ್​, ಮಿಚೆಲ್​ ಸ್ಟಾರ್ಕ್​ ಮತ್ತು ಕ್ಯಾಮರೂನ್​ ಗ್ರೀನ್​ ಅವರನ್ನು ಗಾಯದ ಸಮ್ಯೆಸೆಗಳಿಂದ ಸರಣಿಯ ಮೊದಲೆರೆಡು ಟೆಸ್ಟ್​ ಪಂದ್ಯಗಳಿಂದ ಹೊರಗುಳಿದಿದ್ದರು. ಇಂದೋರ್​ನಲ್ಲಿ ನಡೆಯುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸೀ ಆಲ್ ರೌಂಡರ್​ ಕ್ಯಾಮರೂನ್​ ಗ್ರೀನ್​ ಆಡಲು ಯೋಗ್ಯವಾಗಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ತೀವ್ರ ಟೀಕೆಗೆ ಗುರಿಯಾದ ಆಸ್ಟ್ರೇಲಿಯಾ ತಂಡ: ಬಾರ್ಡರ್​ ಗವಾಸ್ಕರ್​ ಟ್ರೋಪಿಯ 4 ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಆಸ್ಟ್ರೇಲಿಯಾ ತಂಡ ತಮ್ಮದೇ ದೇಶದ ಮಾಧ್ಯಮಗಳಿಂದ ತೀವ್ರ ಟೀಕೆಗೆ ಒಳಗಾಗಿದೆ. ಆಸ್ಟ್ರೇಲಿಯದ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ತಮ್ಮದೇ ತಂಡದ ಆಟಗಾರರನ್ನು ಗುರಿಯಾಗಿಸಿಕೊಂಡು ಕಟುವಾಗಿ ಟೀಕಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರರ ಮತ್ತು ವೀಕ್ಷಕ ವಿವರಣೆಗಾರ ಮಾರ್ಕ್ ವಾ, ದೆಹಲಿ ಪಂದ್ಯದ ಸೋಲಿ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದ ಸ್ಪಿನ್​ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್​ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ

ABOUT THE AUTHOR

...view details