ಮಾಜಿ ಕ್ರಿಕೆಟಿಗ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(ಎನ್ಸಿಎ) ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ಪ್ರಸ್ತುತ ಆಟಗಾರರ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೇ, ನ್ಯೂಜಿಲ್ಯಾಂಡ್ನ ಡೇನಿಯಲ್ ವೆಟ್ಟೋರಿ ಕೂಡ ಸಮಿತಿ ಸೇರಿದ್ದಾರೆ.
ಮಾಜಿ ಆಟಗಾರರ ಪ್ರತಿನಿಧಿಯಾಗಿ ಶ್ರೀಲಂಕಾದ ಮಹೇಲಾ ಜಯವರ್ಧನೆ ಮತ್ತು ವೆಸ್ಟ್ ಇಂಡೀಸ್ನ ರೋಜರ್ ಹಾರ್ಪರ್ ಅವರನ್ನು ಪರಿಗಣಿಸಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳೆಯರ ಮೇಲೆ ವಿಧಿಸಿದ ನಿರ್ಬಂಧದಿಂದಾಗಿ ಅಲ್ಲಿನ ಮಹಿಳಾ ಕ್ರಿಕೆಟ್ ತಂಡ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಯತ್ನ ನಡೆದಿದೆ.
ಕಾಂಬೋಡಿಯಾ, ಕೋಟ್ ಡಿಐವೊಯಿರ್ ಮತ್ತು ಉಜ್ಬೇಕಿಸ್ತಾನಕ್ಕೆ ಐಸಿಸಿಯ ಅಸೋಸಿಯೇಟ್ ಸದಸ್ಯತ್ವ ಸ್ಥಾನಮಾನ ನೀಡಲಾಗಿದೆ. ಕಾಂಬೋಡಿಯಾ ಮತ್ತು ಉಜ್ಬೇಕಿಸ್ತಾನ್ ಏಷ್ಯಾ ಖಂಡದ 24 ಮತ್ತು 25 ನೇ ಸದಸ್ಯ ರಾಷ್ಟ್ರವಾದರೆ, ಕೋಟ್ ಡಿಐವೊರ್ ಆಫ್ರಿಕಾದ 21 ನೇ ರಾಷ್ಟ್ರವಾಗಿದೆ. ಐಸಿಸಿ ಇದೀಗ 96 ಸಹವರ್ತಿ ರಾಷ್ಟ್ರಗಳನ್ನು ಒಳಗೊಂಡಂತೆ ಒಟ್ಟು 108 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
ಇದನ್ನೂ ಓದಿ:ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಣಾಹಣಿಗೆ ಅಖಾಡ ಫಿಕ್ಸ್