ದುಬೈ :ನೆದರ್ಲೆಂಡ್ಸ್ ತಂಡದ ವೇಗಿ ವಿವಿಯನ್ ಕಿಂಗ್ಮಾ ಅವರು ಆಫ್ಘಾನಿಸ್ತಾನದ ವಿರುದ್ಧ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿ ಬಿದ್ದಿದ್ದು, ಐಸಿಸಿಯಿಂದ 4 ಪಂದ್ಯಗಳ ಅಮಾನತಿಗೆ ಒಳಗಾಗಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ 75 ರನ್ಗಳಿಂದ ಗೆದ್ದು ಬೀಗಿತ್ತು. ಆಫ್ಘಾನಿಸ್ತಾನ ಬ್ಯಾಟಿಂಗ್ ಮಾಡುವಾಗ ಕಿಂಗ್ಮಾ 31ನೇ ಓವರ್‌ನಲ್ಲಿ ಚೆಂಡನ್ನು ತಮ್ಮ ಉಗುರುಗಳಿಂದ ಗೀಚಿ ಚೆಂಡಿನ ಆಕಾರವನ್ನು ವಿರೂಪಗೊಳಿಸಿದ್ದರು.
"ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.14 ಅನ್ನು ಕಿಂಗ್ಮಾ ಉಲ್ಲಂಘಿಸಿರುವುದು ಕಂಡು ಬಂದಿದೆ. ಇದು ICC ಮಟ್ಟದ ಟೆಸ್ಟ್ ಪಂದ್ಯ, ODI ಮತ್ತು T20I ಪಂದ್ಯಗಳಲ್ಲಿ ಚೆಂಡಿನ ಸ್ಥಿತಿಯನ್ನು ಬದಲಾಯಿಸುವುದಕ್ಕೆ ಸಂಬಂಧಿಸಿದ್ದಾಗಿದೆ " ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.