ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರು ಮಂಗಳವಾರ ಸಿಡ್ನಿಯಲ್ಲಿ ಅಭ್ಯಾಸದ ಬಳಿಕ ನೀಡಲಾದ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಉತ್ತಮ ಊಟದ ನಿರೀಕ್ಷೆಯಲ್ಲಿದ್ದ ಆಟಗಾರರು ಬಿಸಿ ಆಹಾರ ಮತ್ತು ಹಣ್ಣುಗಳನ್ನು ಒದಗಿಸಲಾಗಿದೆ ಎಂದಿದ್ದರು. ಈ ಬಗ್ಗೆ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ನಡುವೆ ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಕೂಡ ಭಾರತದಲ್ಲಿನ ಆತಿಥ್ಯ ಶ್ಲಾಘಿಸುವ ಮೂಲಕ ಟಾಂಗ್ ನೀಡಿದ್ದಾರೆ.
'ಪಾಶ್ಚಿಮಾತ್ಯ ರಾಷ್ಟ್ರಗಳು ಉತ್ತಮ ಆತಿಥ್ಯ ನೀಡುತ್ತವೆ ಎಂದು ಭಾವಿಸುತ್ತಿದ್ದ ದಿನಗಳು ಈಗಿಲ್ಲ. ಅತ್ಯುನ್ನತ ಆತಿಥ್ಯ ನೀಡುವಲ್ಲಿ ಭಾರತವು ಪಾಶ್ಚಿಮಾತ್ಯ ದೇಶಗಳಿಗಿಂತ ಮುಂದಿದೆ' ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಆಹಾರದ ಬಗ್ಗೆ ಭಾರತದ ಕ್ರಿಕೆಟ್ ಆಟಗಾರರ ಬೇಸರದ ಬೆನ್ನಲ್ಲೇ ಸೆಹ್ವಾಗ್ ಮಾಡಿರುವ ಟ್ವೀಟ್ ಭಾರಿ ವೈರಲ್ ಆಗಿದೆ.
ಇದಾದ ಬಳಿಕ ತಂಡದ ಆಡಳಿತವು ಅಭ್ಯಾಸದಿಂದ ಎಲ್ಲ ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡಿತ್ತು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಪ್ರಾಕ್ಟಿಸ್ ಸೆಸನ್ನಲ್ಲಿ ಭಾಗವಹಿಸಿರಲಿಲ್ಲ. ಇದಕ್ಕೂ ಮುನ್ನ ನೆಟ್ಸ್ನಲ್ಲಿ ಬೆವರು ಹರಿಸಿದ್ದ ಆಟಗಾರರು ಬಹುಶಃ ತಮಗಿಷ್ಟದ ಊಟದ ನಿರೀಕ್ಷೆಯ್ಲಲಿದ್ದರು ಎನ್ನಲಾಗಿದೆ.
ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, 'ಯಾರೂ ಸಹ ಆಹಾರವನ್ನು ಬಹಿಷ್ಕರಿಸಿಲ್ಲ. ಕೆಲವು ಆಟಗಾರರು ಹಣ್ಣು ಹಾಗೂ ಇತರ ಆಹಾರ ಸೇವಿಸಿದರು. ಆದರೆ, ಎಲ್ಲರೂ ಸಹ ಊಟ ಮಾಡಲು ಬಯಸಿದ್ದರು. ಹೀಗಾಗಿ ಹೋಟೆಲ್‌ಗೆ ಹಿಂತಿರುಗಿದ ಬಳಿಕ ಆಹಾರ ಸೇವಿಸಿದ್ದಾರೆ' ಎಂದು ಹೇಳಿದ್ದಾರೆ.