ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 27 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ ಅಂಬಾಟಿ ರಾಯುಡುರನ್ನು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ಸೆಹ್ವಾಗ್ ತಮ್ಮ ದಾಟಿಯಲ್ಲೇ ಗುಣಗಾನ ಮಾಡಿದ್ದಾರೆ.
ರಾಯಡು ಶನಿವಾರ ನಡೆದ ಪಂದ್ಯದಲ್ಲಿ 27 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 266ರ ಸ್ಟ್ರೈಕ್ ರೇಟ್ನಲ್ಲಿ 72 ರನ್ ಬಾರಿಸಿ 218ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಆದರೆ, ಪೊಲಾರ್ಡ್(87) ಓವರ್ನಲ್ಲಿ 16ರನ್ ಸಿಡಿಸಿ ಸಿಎಸ್ಕೆ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡರು.
"27 ಎಸೆತಗಳಲ್ಲಿ 72. ತ್ರೀಡಿ(3D) ಮೋಡ್ನಲ್ಲಿ ಎಲ್ಲವೂ ಉಲ್ಟಾ ಆಗಿದೆ. ಅವರು(ರಾಯುಡು) ಆರ್ಡರ್ ಮಾಡಿದ್ದ 3D ಗ್ಲಾಸ್ ಈ ರೀತಿ ಕೆಲಸ ಮಾಡುತ್ತಿದೆ. ರಾಯುಡು ಅವರಿಂದ ಅದ್ಭುತವಾದ ಹೊಡೆತಗಳು ಬಂದಿವೆ. ಈ ಆವೃತ್ತಿಯಲ್ಲಿ ಚೆನ್ನೈ ತುಂಬ ಉತ್ತಮ ಸೀಸನ್ ಹೊಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.