ನವದೆಹಲಿ: ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಾಷ್ಟು ಸದ್ದು ಮಾಡುತ್ತಿದೆ. ಈ ಒಂದು ಟ್ವೀಟ್ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಸಂಬಂಧಿಸಿದ್ದಾಗಿದೆ. ನಿನ್ನೆ ಸೆಹ್ವಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ವತಃ ತಾವೇ ಹರ್ಮನ್‌ಪ್ರೀತ್ ನಡುವೆ ತಮ್ಮನ್ನ ತಾವೇ ಹೋಲಿಕೆ ಮಾಡಿಕೊಂಡಿದ್ದಾರೆ.
ನಮ್ಮಿಬ್ಬರಲ್ಲಿ ಒಂದು ವಿಷಯವಂತೂ ಕಾಮನ್ - ಸೆಹ್ವಾಗ್:ಈ ಟ್ವೀಟ್ನಲ್ಲಿ ' ನನ್ನ ಮತ್ತು ಹರ್ಮನ್ ಪ್ರೀತ್ ನಡುವೆ ಒಂದು ವಿಷಯವಂತೂ ಸಾಮಾನ್ಯವಾಗಿದೆ. ಅದು ಏನೆಂದರೇ ನಾವಿಬ್ಬರೂ ಬೌಲರ್ಗಳನ್ನು ದಂಡಿಸುವುದನ್ನು ಆನಂದಿಸುತ್ತೇವೆ ಎಂದು ಬರೆದು ಕೊಂಡಿದ್ದಾರೆ ' ಹಾಗೂ ಏಕದಿನ ವಿಶ್ವಕಪ್ ಆಕ್ಟೋಬರ್ನಲ್ಲಿ ಪ್ರಾರಂಭವಾಗುತ್ತಿಲ್ಲ, ಫೆಬ್ರವರಿಯಲ್ಲೇ ಆರಂಭವಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ 20 ವಿಶ್ವಕಪ್ ಆಡಲು ಸಿದ್ದವಾಗಿರುವ ತಂಡಕ್ಕೆ ಶುಭ ಕೋರಿದ್ದಾರೆ.
ಸೆಹ್ವಾಗ್ ಟ್ವೀಟ್ಗೆ ಕೌರ್ ಪ್ರತಿಕ್ರಿಯೆ:ನಂತರ ಸೆಹ್ವಾಗ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಹರ್ಮನ್‌ಪ್ರೀತ್ ಕೌರ್ ಅವರು ಈ ಹಿಂದೆ ಕೂಡ ತಂಡದಲ್ಲಿ ಜೂಲನ್ ದಿ, ಅಂಜುಮ್ ದಿ, ಡಯಾನಾ ಮಾಮ್ ಅವರು ನನ್ನಲ್ಲಿ ಸೆಹ್ವಾಗ್ ಸರ್, ಯುವಿ ಪಾ, ವಿರಾಟ್ ಮತ್ತು ರೈನಾ ಪಾ ಅವರಿಗೆ ಹೋಲಿಕೆ ಮಾಡಿದ್ದರು. ಅವರ ಗೆಲುವನ್ನು ಸಮಾನವಾಗಿ ಆಚರಿಸಿದ್ದೇನೆ, ಹಾಗೆಯೇ ಸೋಲುಗಳಲ್ಲಿ ಅಳುತ್ತಿದ್ದೆ. ನನಗೆ ಕ್ರಿಕೆಟ್ ಸಜ್ಜನರ ಆಟವಲ್ಲ, ಪ್ರತಿಯೊಬ್ಬರ ಆಟ ಎಂದು ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ.