ಹೈದರಾಬಾದ್: ಇಂದು ಟ್ವಿಟರ್ನಲ್ಲಿ ಎರಡು ವಿಷಯ ಟ್ರೆಂಡಿಂಗ್ ಆಗಿದೆ. ಅದು 'ಇಂಡಿಯಾ' ವರ್ಸಸ್ 'ಭಾರತ್' ಆಗಿದ್ದರೆ, ಮತ್ತೊಂದೆಡೆ ವಿರೇಂದ್ರ ಸೆಹ್ವಾಗ್, ಈ ಚರ್ಚೆ ಮುನ್ನಲೆಗೆ ಬರುವ ಮುನ್ನವೇ ಟೀಂ ಭಾರತ ಎಂದು ಹ್ಯಾಷ್ ಟ್ಯಾಗ್ ಹಾಕಿದ್ದರು. ಈ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ನಡುವೆ ಭಾರತ ಸಂವಿಧಾನದಲ್ಲಿನ ಇಂಡಿಯಾ ಎಂಬ ಪದಕ್ಕೆ ಕೊಕ್ ನೀಡಿ ಭಾರತವನ್ನು ಮಾತ್ರ ಉಳಿಸಿಕೊಳ್ಳುವ ನಿರ್ಧರಿಸಿದೆ ಎನ್ನಲಾಗಿದೆ. ಮುಂಬರುವ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಲಾಗುತ್ತಿದೆ.
ಈ ವಿಚಾರದಲ್ಲಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಿಗೂ ಈ ಚರ್ಚೆಗೂ ಏನು ಸಂಬಂಧ ಎಂದು ನೀವೆಲ್ಲ ಕೇಳಬಹುದು. ಅದಕ್ಕೆಲ್ಲ ಕಾರಣ ಇದೆ. ಮೊನ್ನೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವ ವೇಳೆ #INDvsPAK ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಆದರೆ, ಸೆಹ್ವಾಗ್ ಈ ಪಂದ್ಯದ ವೇಳೆ #BHA vs PAK ಎಂಬ ಹ್ಯಾಷ್ಟ್ಯಾಗ್ ಬಳಸಿದ್ದರು. ಈಗ ಇಂಡಿಯಾವನ್ನು ಭಾರತ್ ಎಂದು ಬದಲಾಯಿಸುವ ವಿಷಯ ಸೆಹ್ವಾಗ್ ಮೊದಲೇ ತಿಳಿದು ಈ ರೀತಿ ಟ್ವೀಟ್ ಮಾಡಿದ್ದೀರಾ ಎಂಬಂತಹ ಕಮೆಂಟ್ಗಳು ಎಕ್ಸ್ ಖಾತೆಯಲ್ಲಿ ಹರಿದು ಬರುತ್ತಿವೆ. ಇದಕ್ಕೆ ಹೌದು ಎಂದು ಸೆಹ್ವಾಗ್ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ.
ಅಲ್ಲದೇ ಈ ಇಂಡಿಯಾ ಎಂಬುದನ್ನು ತೆಗೆಯುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ಬ್ರಿಟಿಷರು ಕೊಟ್ಟ ಹೆಸರನ್ನು ಬೇರೆ ದೇಶಗಳು ಬದಲಾಯಿಸಿ ಕೊಂಡಿರುವುದನ್ನು ಉದಾಹಣೆ ನೀಡಿದ್ದಾರೆ. "1996 ರ ವಿಶ್ವಕಪ್‌ನಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ಗೆ ಹಾಲೆಂಡ್ ದೇಶ ನೆದರ್ಲೆಂಡ್ಸ್ಆ ಗಿ ಹೆಸರು ಬದಲಾಯಿಸಿಕೊಂಡು ಆಡಲು ಬಂದಿತ್ತು. 2003 ರಲ್ಲಿ ನಾವು ಅವರನ್ನು ಭೇಟಿಯಾದಾಗ, ಅವರು ನೆದರ್ಲ್ಯಾಂಡ್ಸ್ ಆಗಿದ್ದರು. ಬ್ರಿಟಿಷರು ಇಟ್ಟಿದ್ದ ಹೆಸರನ್ನು ಬರ್ಮಾ ಮತ್ತೆ ಮ್ಯಾನ್ಮಾರ್ ಎಂದು ಬದಲಾಯಿಸಿದೆ. ಅನೇಕರು ತಮ್ಮ ಮೂಲ ಹೆಸರಿಗೆ ಹಿಂತಿರುಗಿದ್ದಾರೆ" ಎಂದು ಸೆಹ್ವಾಗ್ ಉಲ್ಲೇಖಿಸಿದ್ದಾರೆ.