ಸೌತಾಂಪ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಈ ಮೂಲಕ ನಿರಾಸೆಗೊಳಗಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡದ ವಿರುದ್ಧ ಅನೇಕ ಟೀಕೆ ಕೇಳಿ ಬರುತ್ತಿದ್ದು, ಇದರ ಮಧ್ಯೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರೇರಣಾತ್ಮಕ ಟ್ವೀಟ್ ಮಾಡಿದ್ದಾರೆ.
ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡ ಒಂದು ದಿನದ ಬಳಿಕ ಕೊಹ್ಲಿ ಈ ಟ್ವೀಟ್ ಮಾಡಿದ್ದು, ತಂಡಕ್ಕೆ ಪ್ರೇರಣೆ ನೀಡುವ ಸಂದೇಶ ಹಂಚಿಕೊಂಡಿದ್ದಾರೆ. 'ಇದು ಕೇವಲ ಒಂದು ತಂಡವಲ್ಲ, ಒಂದು ಕುಟುಂಬ, ಒಟ್ಟಾಗಿ ಮುಂದೆ ಸಾಗುತ್ತೇವೆ 'ಎಂದಿದ್ದಾರೆ. (This isn’t just a team. It’s a family. We move ahead. TOGETHER)