ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿ 100ನೇ ಟೆಸ್ಟ್​ ಪಂದ್ಯಕ್ಕಿಲ್ಲ ಪ್ರೇಕ್ಷಕರಿಗೆ ಅನುಮತಿ: ಪಂಜಾಬ್ ಕ್ರಿಕೆಟ್ ಘೋಷಣೆ - ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್

ಭಾರತ ಮತ್ತು ಶ್ರೀಲಂಕಾ ನಡುವೆ ಪ್ರಸ್ತುತ ಟಿ-20 ಸರಣಿ ನಡೆಯುತ್ತಿದ್ದು, ಇದರ ನಂತರ ಮೊಹಾಲಿನಲ್ಲಿ ಮೊದಲ ಟೆಸ್ಟ್ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಎಲ್ಲ ಆಟಗಾರರು ತಮ್ಮ ಐಪಿಎಲ್ ತಂಡದ ಬಯೋಬಬಲ್ ಸೇರಲಿರುವುದರಿಂದ ಎಚ್ಚರಿಕೆಯ ಕ್ರಮವಾಗಿ ಪಿಸಿಎ ಈ ನಿರ್ಧಾರ ತೆಗೆದುಕೊಂಡಿದೆ.

Virat Kohli's 100th Test match will be behind closed doors
ವಿರಾಟ್ ಕೊಹ್ಲಿ 100ನೇ ಟೆಸ್ಟ್​

By

Published : Feb 26, 2022, 5:33 PM IST

ನವದೆಹಲಿ: ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್​ ವಿರಾಟ್​ ಕೊಹ್ಲಿ ಅವರ 100ನೇ ಟೆಸ್ಟ್​ ಪಂದ್ಯವಾಗಿದ್ದು, ಈ ಪಂದ್ಯ ಕೋವಿಡ್​ 19 ಕಾರಣದಿಂದ ಪ್ರೇಕ್ಷಕರಿಲ್ಲದೇ ನಡೆಯಲಿದೆ ಎಂದು ಪಿಸಿಎ ಸಿಇಒ ದೀಪಕ್ ಶರ್ಮಾ ತಿಳಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಪ್ರಸ್ತುತ ಟಿ-20 ಸರಣಿ ನಡೆಯುತ್ತಿದ್ದು, ಇದರ ನಂತರ ಮೊಹಾಲಿನಲ್ಲಿ ಮೊದಲ ಟೆಸ್ಟ್ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಎಲ್ಲ ಆಟಗಾರರು ತಮ್ಮ ಐಪಿಎಲ್ ಬಯೋಬಬಲ್ ಸೇರಲಿರುವುದರಿಂದ ಎಚ್ಚರಿಕೆಯ ಕ್ರಮವಾಗಿ ಪಿಸಿಎ ಈ ನಿರ್ಧಾರ ತೆಗೆದುಕೊಂಡಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ತಮ್ಮ 100ನೇ ಪಂದ್ಯವನ್ನು ರೋಹಿತ್ ನಾಯಕತ್ವದಡಿ ಆಡಲು ಸಜ್ಜಾಗಿದ್ದರು. ಈ ಪಂದ್ಯ ಕಣ್ತುಂಬಿಕೊಳ್ಳಲು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ. ಈ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್​ ಅಭಿಮಾನಿಗಳ ಆಸೆಗೆ ಭಂಗತಂದಿದೆ.

ಶನಿವಾರ ಎಎನ್​ಐ ಜೊತೆ ಮಾತನಾಡಿದ ದೀಪಕ್ ಶರ್ಮಾ, " ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್​ ಪಂದ್ಯ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ, ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ" ಎಂದು ಮಾಹಿತಿ ನೀಡಿದ್ದಾರೆ. ಕೊಹ್ಲಿ 99 ಟೆಸ್ಟ್ ಪಂದ್ಯಗಳಿಂದ 50. 39ರ ಸರಾಸರಿಯಲ್ಲಿ 7962 ರನ್​ಗಳಿಸಿದ್ದಾರೆ. ಇದರಲ್ಲಿ 27 ಶತಕ ಮತ್ತು 28 ಅರ್ಧಶತಕಗಳು ಸೇರಿವೆ.

ABOUT THE AUTHOR

...view details