ಕರ್ನಾಟಕ

karnataka

ETV Bharat / sports

ಗಾಯದಿಂದ ಚೇತರಿಸಿಕೊಳ್ಳದ ವಿರಾಟ್​.. 2ನೇ ಏಕದಿನ ಪಂದ್ಯಕ್ಕೂ ಬಹುತೇಕ ಅನುಮಾನ - ಭಾರತ ವರ್ಸಸ್ ಇಂಗ್ಲೆಂಡ್

ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ 2ನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆಂದು ವರದಿಯಾಗಿದೆ.

Virat Kohli Yet to Recover From Groin Injury
Virat Kohli Yet to Recover From Groin Injury

By

Published : Jul 13, 2022, 6:43 PM IST

ಲಾರ್ಡ್ಸ್​​​​​(ಲಂಡನ್​​​):ತೊಡೆಸಂದು ಗಾಯದ(ಗ್ರೋಯಿನ್‌ ಇಂಜುರಿ) ಕಾರಣ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಎರಡನೇ ಏಕದಿನ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆಂದು ವರದಿಯಾಗಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯುವ 2ನೇ ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದ ವೇಳೆ ಗ್ರೋಯಿನ್​ ಇಂಜರಿಗೊಳಗಾಗಿದ್ದ ವಿರಾಟ್​ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಹೀಗಾಗಿ, ಅವರ ಸ್ಥಾನದಲ್ಲಿ ಶ್ರೇಯಸ್​ ಅಯ್ಯರ್​ ಕಣಕ್ಕಿಳಿದಿದ್ದರು. ಮುಂದಿನ ಎರಡು ಪಂದ್ಯಗಳಲ್ಲೂ ಮಾಜಿ ಕ್ಯಾಪ್ಟನ್​ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರು ಮತ್ತಷ್ಟು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿರಿ:ರೋಹಿತ್​ ಶರ್ಮಾ ಬಾರಿಸಿದ ಸಿಕ್ಸರ್​​ನಿಂದ ಬಾಲಕಿಗೆ ಪೆಟ್ಟು.. ಪುಟಾಣಿ ಆರೋಗ್ಯ ವಿಚಾರಿಸಿದ ಹಿಟ್​ಮ್ಯಾನ್​!

ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಏಕದಿನ ಪಂದ್ಯವನ್ನಾಡಲು ನ್ಯಾಟಿಂಗ್​ಹ್ಯಾಮ್​​ನಿಂದ ತೆರಳಿದ್ದ ಟೀಂ ಇಂಡಿಯಾ ಜೊತೆ ವಿರಾಟ್​​ ಕೊಹ್ಲಿ ಪ್ರಯಾಣ ಬೆಳೆಸಿರಲಿಲ್ಲ. ವೈದ್ಯಕೀಯ ಚಿಕಿತ್ಸೆಗೋಸ್ಕರ ಅವರು ನ್ಯಾಟಿಂಗ್​ಹ್ಯಾಮ್​ನಲ್ಲಿ ಉಳಿದುಕೊಂಡಿದ್ದರೆಂದು ಹೇಳಲಾಗ್ತಿದೆ.

ಕಳೆದ ಎರಡೂವರೆ ವರ್ಷದಿಂದ ವಿರಾಟ್​ ಕೊಹ್ಲಿ ರನ್​​ಗಳಿಸಲು ಹರಸಾಹಸ ಪಡುತ್ತಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಹಾಗೂ ಟಿ-20 ಸರಣಿಯಲ್ಲೂ ವಿರಾಟ್​​ ಮಿಂಚಿಲ್ಲ. ಹೀಗಾಗಿ, ಮುಂಬರುವ ಟಿ-20 ವಿಶ್ವಕಪ್​​ನಲ್ಲಿ ಅವರಿಗೆ ಸ್ಥಾನ ನೀಡುವ ಬಗ್ಗೆ ಅನೇಕ ಟೀಕೆ ವ್ಯಕ್ತವಾಗ್ತಿವೆ. ಆದರೆ, ರೋಹಿತ್ ಶರ್ಮಾ ಹಾಗೂ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್​ ರನ್​ ಮಷಿನ್ ಪರ ಬ್ಯಾಟ್​ ಬೀಸಿದ್ದಾರೆ.

ABOUT THE AUTHOR

...view details