ಮುಂಬೈ: ಬ್ಯಾಟ್ಸ್ಮನ್ಗಳ ನೆಚ್ಚಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 200ನೇ ಪಂದ್ಯವನ್ನಾಡಲಿದೆ. ಇದೇ ಪಂದ್ಯದಲ್ಲಿ ನಾಯಕ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಕ್ರಮವಾಗಿ 6000 ಮತ್ತು 5000 ಮೈಲುಗಲ್ಲನ್ನು ಸ್ಥಾಪಿಸುವ ಅವಕಾಶವಿದೆ.
ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಆರ್‌ಸಿಬಿ ಪಾಲಿನ 200ನೇ ಪಂದ್ಯವಾಗಲಿದೆ. ಈ ಮೂಲಕ ಐಪಿಎಲ್ನಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ 2ನೇ ಐಪಿಎಲ್ ಫ್ರಾಂಚೈಸಿ ಎಂಬ ದಾಖಲೆಗೆ ಆರ್‌ಸಿಬಿ ಪಾತ್ರವಾಗಲಿದೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 207 ಪಂದ್ಯಗಳನ್ನಾಡಿ ಅಗ್ರಸ್ಥಾನದಲ್ಲಿದೆ.
ವಿರಾಟ್ ಕೊಹ್ಲಿ 6000 ರನ್
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 51 ರನ್ಗಳಿಸಿದರೆ ಐಪಿಎಲ್ ಇತಿಹಾಸದಲ್ಲಿ 6000 ರನ್ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಅವರು 187 ಇನ್ನಿಂಗ್ಸ್ಗಳಲ್ಲಿ 5949 ರನ್ಗಳಿಸಿದ್ದಾರೆ.