ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಹೊಸ ಆಲ್​ರೌಂಡರ್‌ ಹುಡುಕಾಟ: ನೆಟ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಬೌಲಿಂಗ್ ಅಭ್ಯಾಸ!

ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ನೆಟ್ಸ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

Virat Kohli
Virat Kohli

By ETV Bharat Karnataka Team

Published : Oct 27, 2023, 5:25 PM IST

ಲಖನೌ (ಉತ್ತರ ಪ್ರದೇಶ):ಭಾರತ ವಿಶ್ವಕಪ್ ಕ್ರಿಕೆಟ್​ ತಂಡ ಪ್ರಕಟವಾದ ಸಂದರ್ಭದಲ್ಲಿ, ಅನುಭವದ ಕೊರತೆಯ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ನಾಯಕ ರೋಹಿತ್​ ಶರ್ಮಾ ಹಾಸ್ಯಭರಿತವಾಗಿ ಪ್ರತಿಕ್ರಿಯಿಸುತ್ತಾ "ವಿಶ್ವಕಪ್​ ವೇಳೆಗೆ ಸಾಧ್ಯವಾದಲ್ಲಿ ಶರ್ಮಾ ಮತ್ತು ಕೊಹ್ಲಿ ಬೌಲಿಂಗ್​ ಮಾಡುತ್ತಾರೆ" ಎಂದಿದ್ದರು. ಇದೇ ವೇಳೆ ಮುಖ್ಯ ಆಯ್ಕೆದಾರ ಅಜಿತ್​ ಅಗರ್ಕರ್​, ಅವರಿಗೆ ಮನವರಿಕೆ ಮಾಡಿದ್ದೇವೆ ಎಂದೂ ಸಹ ಹೇಳಿದ್ದರು. ಈ ಮಾತು ಈಗ ನಿಜವಾದಂತಿದೆ. ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್​​ ಕೊಹ್ಲಿ ನೆಟ್ಸ್‌ನಲ್ಲಿ ಬೌಲಿಂಗ್​ ಅಭ್ಯಾಸ ಮಾಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡು ಮೈದಾನದಿಂದ ತೆರಳಿದಾಗ ಅವರ ಓವರ್ ಅನ್ನು ವಿರಾಟ್​ ಕೊಹ್ಲಿ ಮುಂದುವರೆಸಿದ್ದರು. ಸುಮಾರು 6 ವರ್ಷಗಳ ನಂತರ ಕೊಹ್ಲಿ ಬೌಲಿಂಗ್​ ಮಾಡಿದ್ದರು. ಈಗ 'ರನ್​ ಮಷಿನ್​' ವಿಕೆಟ್​ ಉರುಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕಾಗಿ ಧರ್ಮಶಾಲಾದಿಂದ ಲಖನೌಗೆ ಬಂದಿರುವ ತಂಡ ನೆಟ್ಸ್​ನಲ್ಲಿ ಬೆವರಿಳಿಸುತ್ತಿದೆ. ಆಟಗಾರರು ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ವಿರಾಟ್​ ಸೇರಿದಂತೆ, ಶುಭ್‌ಮನ್​ ಗಿಲ್​, ಸೂರ್ಯಕುಮಾರ್​ ಯಾದವ್​ ಬೌಲಿಂಗ್​ ಮಾಡುತ್ತಿರುವುದನ್ನು ಕಾಣಬಹುದು.

ಹಾರ್ದಿಕ್​ ಪಾಂಡ್ಯ ಅವರ ಕೊರತೆ ನೀಗಿಸಲು ತಂಡದಲ್ಲಿ ಹೊಸ ಬೌಲರ್​ ಅಥವಾ ಆಲ್​ರೌಂಡರ್​ನ ಹುಡುಕಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆ ಈ ವಿಡಿಯೋದಿಂದ ಹುಟ್ಟಿಕೊಂಡಿದೆ. ಇನ್​​ಸ್ಟಾಗ್ರಾಮ್​ ಕ್ಯಾಪ್ಶನ್​ನಲ್ಲಿ ಬಿಸಿಸಿಐ, "ಪ್ರತಿಯೊಬ್ಬರು ಬೌಲರ್​ ಆಗಲು ಪ್ರಯತ್ನಿಸಿದ್ದಾರೆ. ಪ್ರತಿಯೊಬ್ಬರೂ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ (Everyone trying their ‘Luck’now isn’t it)" ಎಂದು ಬರೆದುಕೊಂಡಿದೆ. ವಿರಾಟ್​ ತಮ್ಮ ಎಂದಿನ ವಿಶೇಷ ಆ್ಯಕ್ಷನ್​ ಮೂಲಕ ಬೌಲಿಂಗ್​ ಮಾಡಿದರೆ, ಗಿಲ್​ ಸ್ಪಿನ್​ಗೆ ಪ್ರಯತ್ನಿಸಿದರು. ಬುಮ್ರಾ ಎಡಗೈ ಬೌಲಿಂಗ್​ ಪ್ರಯತ್ನಿಸಿದರೆ, ಕುಲ್ದೀಪ್​ ಮತ್ತು ರವೀಂದ್ರ ಜಡೇಜಾ ವೇಗದ ಬೌಲಿಂಗ್​ ಮಾಡಲು ಮುಂದಾದರು.

ವಿಶ್ವಕಪ್​ನಲ್ಲಿ ಭಾರತ ತಂಡ ಸತತ ಐದು ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಅಕ್ಟೋಬರ್​ 29ರಂದು ಹಾಲಿ ಚಾಂಪಿಯನ್​​ ಇಂಗ್ಲೆಂಡ್​ ವಿರುದ್ಧ ಲಖನೌನ ಎಕಾನಾ ಕ್ರಿಡಾಂಗಣದಲ್ಲಿ ಪಂದ್ಯ ನಡೆಯಲಿದೆ. 8 ಆಟಗಾರರವರೆಗೂ ಬ್ಯಾಟಿಂಗ್​ ಲೈನ್​​ಅಪ್​ ಹೊಂದಿರುವ ಇಂಗ್ಲೆಂಡ್​ ವಿಶ್ವಕಪ್​ನಲ್ಲಿ ಏಕೈಕ ಗೆಲುವು ಕಂಡಿದ್ದು, ಪ್ಲೇ ಆಫ್​ ಪ್ರವೇಶ ಬಹುತೇಕ ಅನುಮಾನ. ಹೀಗಿರುವಾಗ ಆಂಗ್ಲರು ಅಜೇಯ ಟೀಮ್​ ಇಂಡಿಯಾ ಮೇಲೆ ಜಯ ದಾಖಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​: ಇಂಗ್ಲೆಂಡ್‌ ವಿರುದ್ಧ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೇ ಭಾರತ?

ABOUT THE AUTHOR

...view details